ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಮತ್ತೊಬ್ಬ ವ್ಯಕ್ತಿ ಗುಣಮುಖನಾಗಿ ಇಂದು ಬಿಡುಗಡೆಯಾಗಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ನಾಲ್ವರು ಸೋಂಕಿತರ ಪೈಕಿ ಮೂವರು ಗುಣಮುಖರಾದಂತಾಗಿದೆ.
ಮೇ 18ರಂದು ಸೋಂಕು ದೃಢವಾಗಿದ್ದ ರೋಗಿ-1173ಅನ್ನು ಕೊಪ್ಪಳದ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರೋಗಿ-1173 ಗುಣಮುಖನಾದ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.
ಎರಡು ದಿನಗಳ ಹಿಂದೆ ರೋಗಿ-1174 ಮತ್ತು ರೋಗಿ-1175 ಗುಣಮುಖರಾಗಿ ಬಿಡುಗಡೆಯಾಗಿದ್ದರು. ಈಗ ನಾಲ್ವರು ಸೋಂಕಿತರ ಪೈಕಿ ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇನ್ನೊಬ್ಬ ಸೋಂಕಿತನಿಗೆ ಚಿಕಿತ್ಸೆ ಮುಂದುವರೆದಿದೆ. ಜಿಲ್ಲೆಯಲ್ಲಿ ಒಂದು ಸಕ್ರಿಯ ಪ್ರಕರಣ ಉಳಿದಂತಾಗಿದೆ.