ಗಂಗಾವತಿ(ಕೊಪ್ಪಳ): ತಾಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನ ಗಡ್ಡೆಯಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳ ನೇತೃತ್ವದಲ್ಲಿ ಶನಿವಾರ ಕವೀಂದ್ರ ತೀರ್ಥರ ಉತ್ತರ ಪೂರ್ವರಾಧನೆ ನೆರವೇರಿತು.
ಕವೀಂದ್ರ ತೀರ್ಥರ ಪೂರ್ವರಾಧನೆ ನಿಮಿತ್ತ ನವವೃಂದವನ ಗಡ್ಡೆಯಲ್ಲಿನ ಬೃಂದಾವನಕ್ಕೆ ವಿಶೇಷ ಫಲ ಪಂಚಾಮೃತ ಅಭಿಷೇಕ ಮಾಡಲಾಯಿತು. ಬಳಿಕ ವೃಂದಾವನಕ್ಕೆ ವಿಶೇಷ ಅಲಂಕಾರ ನೆರವೇರಿಸಲಾಯಿತು. ಭಾನುವಾರ 12.30ರವರೆಗೆ ಕವೀಂದ್ರ ತೀರ್ಥರ ಮಧ್ಯರಾಧನೆ ನಡೆಯಿತು.
ಇದನ್ನೂ ಓದಿ: ನವ ವೃಂದಾವನ ಗಡ್ಡೆಯ ವಾರಸತ್ವ ವಿವಾದ: ಹೈಕೋರ್ಟ್ ಮಹತ್ವದ ಆದೇಶ