ETV Bharat / state

ಹುಲಿಗೆಮ್ಮದೇವಿ ದರ್ಶನ ಪಡೆದ ಕಂಪ್ಲಿ ಶಾಸಕ ... ರಮೇಶ್​ ಜಾರಕಿಹೊಳಿ ಕುರಿತು ಗಣೇಶ್ ಹೇಳಿದ್ದೇನು?  ​

ಬಿಡದಿ ರೆಸಾರ್ಟ್​ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ- ಜಾಮೀನಿನ ಮೇಲೆ ಬಿಡುಗಡೆ ಆಗ್ತಿದ್ದಂಗೆ ದೇವರ ಮೊರೆಹೋದ ಕಂಪ್ಲಿ ಗಣೇಶ್​-​ ಆರಾಧ್ಯ ದೈವ ಹುಲಗಿಯ ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದ ಗಣೇಶ್​ ಕುಟುಂಬ- ರಮೇಶ್​ ಜಾರಕಿಹೊಳಿಗೆ ನೈತಿಕ ಬೆಂಬಲ ನೀಡುವುದಾಗಿ ಘೋಷಣೆ

author img

By

Published : Apr 26, 2019, 11:02 AM IST

ಶಾಸಕ‌ ಗಣೇಶ್​

ಕೊಪ್ಪಳ: ಬಿಡದಿಯ ಈಗಲ್ಟನ್​ ರೆಸಾರ್ಟ್​ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕಂಪ್ಲಿ ಶಾಸಕ‌ ಜೆ.ಎನ್. ಗಣೇಶ್​ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದಿದ್ದಾರೆ.

ಜೆ.ಎನ್. ಗಣೇಶ್​ ಅವರ ಆರಾಧ್ಯ ದೈವವಾಗಿರುವ ಕೊಪ್ಪಳ ತಾಲೂಕು ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಇಂದು ಬೆಳಗಿನಜಾವ ಕುಟುಂಬ ಸಮೇತರಾಗಿ ಬಂದು ದರ್ಶನ ಪಡೆದರು. ದೇವಸ್ಥಾನದ ಬಳಿ ತುಂಗಭದ್ರಾ ನದಿಯಲ್ಲಿ ಮಿಂದೆದ್ದ ಬಳಿಕ ದೇವಿಯ ದರ್ಶನ ಪಡೆದರು.

ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದ ಕಂಪ್ಲಿ ಶಾಸಕ‌ ಗಣೇಶ್​

ಇನ್ನು, ಹಲ್ಲೆ ಪ್ರಕರಣ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದ ಶಾಸಕ ಗಣೇಶ್, ಪ್ರಕರಣದ ಬಗ್ಗೆ ನಾನೇನು ಮಾತನಾಡುವುದಿಲ್ಲ. ರಮೇಶ್ ಜಾರಕಿಹೊಳಿ ನಮ್ಮ ಸಮುದಾಯದವರು. ಹೀಗಾಗಿ ಅವರಿಗೆ ನಾನು ನೈತಿಕ ಬೆಂಬಲ ನೀಡುತ್ತೇನೆ. ನಾನು ಸಣ್ಣವನಿದ್ದಾಗಿನಿಂದಲೂ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬರುತ್ತೇನೆ. ಇದರಲ್ಲಿ ವಿಶೇಷತೆ ಏನೂ ಇಲ್ಲವೆಂದು ಹೇಳಿದರು.

Intro:Body:ಕೊಪ್ಪಳ:- ರೆಸಾರ್ಟ್ ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಕಂಪ್ಲಿ ಶಾಸಕ‌ ಜೆ.ಎನ್. ಗಣೇಶ ಅವರು ಜಾಮೀನಿನ ಮೇಲೆ ಜೈಲಿನಿಂದ‌ ಬಿಡುಗಡೆಯ ಬಳಿಕ ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದಿದ್ದಾರೆ. ಜೆ.ಎನ್. ಗಣೇಶ ಅವರ ಆರಾಧ್ಯ ದೈವವಾಗಿರುವ ಕೊಪ್ಪಳ ತಾಲೂಕಿನ ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಇಂದು ಬೆಳಗಿನಜಾವ ಬಂದು ದರ್ಶನ ಪಡೆದರು. ದೇವಸ್ಥಾನದ ಬಳಿಯ ತುಂಗಭದ್ರಾ ನದಿಯಲ್ಲಿ ಮಿಂದೆದ್ದು ಶ್ರೀ ಹುಲಿಗೆಮ್ಮದೇವಿಯ ದರ್ಶನ ಪಡೆದರು. ಇನ್ನು ಹಲ್ಲೆ ಪ್ರಕರಣ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದ ಶಾಸಕ ಗಣೇಶ್, ಪ್ರಕರಣದ ಬಗ್ಗೆ ನಾನೇನು ಮಾತನಾಡುವುದಿಲ್ಲ. ರಮೇಶ್ ಜಾರಕಿಹೊಳಿ ನಮ್ಮ ಸಮಯದಾಯದವರು. ಹೀಗಾಗಿ ಅವರಿಗೆ ನಾನು ನೈತಿಕ ಬೆಂಬಲ ನೀಡುತ್ತೇನೆ. ನಾನು ಸಣ್ಣವನಿದ್ದಾಗಿನಿಂದಲೂ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬರುತ್ತೇನೆ. ಇದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ಗಣೇಶ ಇದೇ ಸಂದರ್ಭದಲ್ಲಿ ಹೇಳಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.