ಕುಷ್ಟಗಿ : ಪಟ್ಟಣದ 1ನೇ ವಾರ್ಡ್ನ ಕೃಷ್ಣಗಿರಿ ಕಾಲೋನಿಯಲ್ಲಿ ಹಾಡುಹಗಲೇ ಜೆಸಿಬಿಯ ಚಿಕ್ಕ ಬಕೆಟ್ ಹೊತ್ತೊಯ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಡಿ.5ರಂದು ಮಾಜಿ ಪುರಸಭೆ ಸದಸ್ಯ ನಾಗರಾಜ ಮೇಲಿನಮನಿ ಅವರ ಮನೆ ಎದುರಿನ ಬಯಲಿನಲ್ಲಿ ಶರಣಪ್ಪ ಬಿಜಕಲ್ ಎಂಬುವರು ಜೆಸಿಬಿ ನಿಲ್ಲಿಸಿದ್ದರು. ಜೆಸಿಬಿಯ ಎರಡು ಸಣ್ಣ ಬಕೆಟ್ಗಳನ್ನು ಅಲ್ಲಿಯೇ ಇರಿಸಿದ್ದರು.
ಇದರ ಮೇಲೆ ಕಣ್ಣಿಟ್ಟಿದ್ದ ಇಬ್ಬರು ಬೈಕ್ನಲ್ಲಿ ಬಂದು ಭಾರವಾದ ಬಕೆಟ್ ಹೊತ್ತೊಯ್ದಿದ್ದಾರೆ. ಕಳ್ಳರು ಜೆಸಿಬಿ ಬಕೆಟ್ ಅನ್ನು ಬೈಕ್ನಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯ ಪಕ್ಕದ ಸಿಡಿಪಿಒ ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಜೆಸಿಬಿ ಮಾಲೀಕ ಶರಣಪ್ಪ ಬಿಜಕಲ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮೆರಾದಲ್ಲಿನ ದೃಶ್ಯ ಅಸ್ಪಷ್ಟವಾಗಿದೆ. ಆದರೂ ಪತ್ತೆ ಕಾರ್ಯ ಮುಂದುವರೆದಿದೆ. ಜತೆಗೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗುಜರಿ ಅಂಗಡಿಗಳಲ್ಲಿ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ: ದಾವಣಗೆರೆ ಬಳಿ ಖಾಸಗಿ ಬಸ್ ಪಲ್ಟಿ: 20ಕ್ಕೂ ಹೆಚ್ಚು ಜನರಿಗೆ ಗಾಯ