ETV Bharat / state

ವರ್ಷವಾದರೂ ಪೂರ್ಣಗೊಳ್ಳದ ಯುಜಿಡಿ ಕಾಮಗಾರಿ: ಶಾಸಕ ಜನಾರ್ದನ ರೆಡ್ಡಿ ಆಕ್ರೋಶ

author img

By

Published : Jun 8, 2023, 12:55 PM IST

Updated : Jun 8, 2023, 3:11 PM IST

ಶೀಘ್ರ ಅಭಿವೃದ್ಧಿ ಯೋಜನೆಗಳು ಪೂರ್ಣ ಕಾರ್ಯಗತವಾಗಬೇಕು ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ

Janardana reddy took class to Officers
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜನಾರ್ದನ ರೆಡ್ಡಿ

ಗಂಗಾವತಿ: ನಗರದಲ್ಲಿ ವರ್ಷಗಟ್ಟಲೇ ಆಮೆಗತಿಯಲ್ಲಿ ಸಾಗಿದ್ದ ಹಾಗೂ ಜನೋಪಯೋಗಕ್ಕೆ ಬಾರದ ಅವೈಜ್ಞಾನಿಕವಾಗಿ ಒಳ ಚರಂಡಿ ಕಾಮಗಾರಿ ನಡೆಸಿದ್ದೀರಿ ಎಂದು ನಗರಸಭೆ ಮತ್ತು ಟೆಂಡರ್ ಪಡೆದ ಗುತ್ತಿಗೆ ಕಂಪನಿ ಅಧಿಕಾರಿಗಳ ವಿರುದ್ಧ ಶಾಸಕ ಗಾಲಿ ಜನಾರ್ದನ ರೆಡ್ಡಿ ಗರಂ ಆದರು. ನಗರದ ನಗರಸಭೆ ಸಭಾಂಗಣದಲ್ಲಿ ನಗರದ ಅಭಿವೃದ್ಧಿ ಕುರಿತು ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕರಾದ ಬಳಿಕ ಮೊದಲ ಬಾರಿಗೆ ಗಂಗಾವತಿ ನಗರಸಭೆ ಕಚೇರಿಗೆ ಭೇಟಿ ನೀಡಿದ ಅವರು, ಇಲ್ಲಿಯ ಸಭಾಂಗಣದಲ್ಲಿ ಅಧಿಕಾರಿಗಳ ಮತ್ತು ನಗರಸಭೆ ಕೆಲ ಸದಸ್ಯರೊಂದಿಗೆ ಸಾರ್ವಜನಿಕರ ಕುಂದು - ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮೊದಲು ನಗರಸಭೆಗೆ ಬರುತ್ತಿರುವ ನಾನಾ ಆದಾಯದ ಮೂಲ, ಅನುದಾನ, ಖರ್ಚು - ವೆಚ್ಚಗಳ ಮಾಹಿತಿ, ಅಭಿವೃದ್ಧಿ ಯೋಜನೆ, ಕುಂಠಿತಗೊಂಡ ಕಾಮಗಾರಿಗಳ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಒಳಚರಂಡಿ ಮತ್ತು ನೀರು ಸರಬರಾಜಿನ ವಿಷಯ ಪ್ರಸ್ತಾವಾಯಿತು.

ಒಳ ಚರಂಡಿಯಿಂದ ಗಂಗಾವತಿ ನಗರದ ಎಲ್ಲ ರಸ್ತೆಗಳು ತೀರಾ ಹದಗೆಟ್ಟು ನಗರದ ಸೌಂದರೀಕರಣ ಹಾಳಾಗಿದೆ ಎಂದು ಶಾಸಕ ಅಸಮಾಧಾನ ವ್ಯಕ್ತಪಡಿಸಿದರು. ಯುಜಿಡಿ ಕಾಮಕಾರಿ ವಿಳಂಬದ ವಿಚಾರದಲ್ಲಿ ಸಮಜಾಯಷಿ ನೀಡಲೆತ್ನಿಸಿದ ನಗರ ಯುಜಿಡಿ ಇಲಾಖೆ ಎಇಇ ಕೊರೆಪ್ಪ ಮಾಟೂರ್, ಎಇ ಅವಿನಾಶ್ ಮತ್ತು ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕಳೆದ 20 ವರ್ಷದಿಂದಲೂ ನನೆಗುದಿಗೆ ಬಿದ್ದ ಒಳಚರಂಡಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಅನುದಾನ ಬಳಕೆಯಾಗಿದೆ ಹೊರತು 225 ಕಿ.ಮೀ. ವ್ಯಾಪ್ತಿಯ ಯೋಜನೆ ಶೇ. 50ರಷ್ಟು ಪೂರ್ಣಗೊಂಡಿಲ್ಲ. ಶುದ್ಧ ಕುಡಿಯುವ ನೀರಿನ 10 ವಲಯಗಳಲ್ಲಿ 4 ವಲಯಗಳು ನಗರಸಭೆಗೆ ಹಸ್ತಾಂತರವಾಗಿದೆ.

ಕೆಲಸಗಳು ವಿಳಂಬವಾದರೆ ಶಿಸ್ತು ಕ್ರಮ, ಎಚ್ಚರಿಕೆ: ಕೆಲವೆಡೆ ಕಾಮಗಾರಿ ಅಪೂರ್ಣವಾಗಿವೆ. ಯುಜಿಡಿ ನಿರ್ವಹಣೆ ವಿಚಾರದಲ್ಲಿ ನೈರ್ಮಲ್ಯ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಬೇಕಿದ್ದು, ನಗರಸಭೆ ಅನುದಾನ ಬಳಸಿಕೊಳ್ಳಿ. ನೆಪ ಹೇಳಿ ಯೋಜನೆಗಳ ವಿಳಂಬಕ್ಕೆ ಅವಕಾಶ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನೌಕರರ ಪ್ರತಿಯೊಂದನ್ನು ಗಮನಿಸಲಾಗುತ್ತಿದ್ದು, ಮುಂದಿನ ದಿನ ಸೋಮಾರಿಗಳಿಗೆ ತಕ್ಕ ಪಾಠ ಕಲಿಸುವೆ. ಇದೇ ತಿಂಗಳಾಂತ್ಯಕ್ಕೆ ಒಳಚರಂಡಿ ಮತ್ತು ದ್ವಿತೀಯ ಹಂತದ ಶುದ್ಧ ಕುಡಿವ ನೀರಿನ ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾಗಬೇಕು. ನಿರ್ಲಕ್ಷಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು.

ನಗರದ ನೈರ್ಮಲೀಕರಣ ವಿಚಾರದಲ್ಲಿ ಜನರ ಸಹಕಾರ ಮುಖ್ಯವಾಗಿದ್ದು, ಪೌರ ಕಾರ್ಮಿಕರಿಂದ ಮಾತ್ರ ಸಾಧ್ಯವಿಲ್ಲ. ತ್ಯಾಜ್ಯ ವಿಲೇವಾರಿ ವಿಚಾರದಲ್ಲೂ ವಾರ್ಡ್​ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸಬೇಕು. 14 ಪ್ರದೇಶಗಳಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಜಾಗ ಆಯ್ಕೆ ಮಾಡಲಾಗಿದೆ. ಶೌಚಾಲಯ ನಿರ್ವಹಣೆಗೆ ನಗರಸಭೆ ಅನುದಾನ ಕ್ರೋಢೀಕರಿಸುವ ಬಗ್ಗೆ ಚಿಂತನೆ ನಡೆದಿದೆ. ತೆರಿಗೆ ವಸೂಲಿ ಪ್ರಮಾಣ ಹೆಚ್ಚಾಗಬೇಕಿದ್ದು, ಜನರ ಕಾರ್ಯಗಳನ್ನು ನಿರ್ಲಕ್ಷಿಸಬಾರದು ಎಂದರು.

ಕರ್ತವ್ಯ ವಿಚಾರದಲ್ಲಿ ಯಾವುದೇ ಲಾಬಿಗೂ ಮಣಿಯಲ್ಲ, ನೌಕರರು ಮಣಿಯಬಾರದು. ನಿರ್ಲಕ್ಷಿಸಿದರೆ ಅಧಿಕಾರಿಗಳನ್ನೇ ನೇರ ಹೊಣೆಯನ್ನಾಗಿ ಮಾಡುತ್ತೇನೆ ಎಂದು ಶಾಸಕರು ಎಚ್ಚರಿಕೆ ನೀಡಿದರು. ಸಭೆಗೆ ಹಾಜರಾಗುವಂತೆ ಎಲ್ಲ ಸದಸ್ಯರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಕೆಆರ್​ಪಿಪಿ ಸೇರ್ಪಡೆಯಾದ ಕೆಲವರು ಹೊರತು ಪಡಿಸಿದರೆ, ಕಾಂಗ್ರೆಸ್, ಬಿಜೆಪಿ ಬಹುತೇಕ ಸದಸ್ಯರು ಗೈರಾಗಿದ್ದರು. ಕೆಲ ಸಮಸ್ಯೆಗಳನ್ನು ತೆರೆದಿಟ್ಟ ಸದಸ್ಯರಿಗೆ, ನೀವು ಮೊದಲು ಲಾಭಿ ನಡೆಸುವುದನ್ನು ಬಿಟ್ಟು ಕೆಲಸ ಮಾಡಿ ಎಂದು ಶಾಸಕರು ಸಲಹೆ ನೀಡಿದರು.

ಪೌರಾಯುಕ್ತ ವಿರೂಪಾಕ್ಷಮೂರ್ತಿ, ವ್ಯವಸ್ಥಾಪಕ ಷಣ್ಮುಖಪ್ಪ, ಪ್ರಭಾರ ಎಇಇ ಶಂಕರಗೌಡ, ನೈರ್ಮಲ್ಯ ನಿರೀಕ್ಷ ಚೇತನ್, ಜೆಡಿ ಪ್ರವೀಣ್​ ಕುಮಾರ್​, ಆರೋಗ್ಯ ನಿರೀಕ್ಷಕ ಎ. ನಾಗರಾಜ್ ಸೇರಿದಂತೆ ನಗರಸಭೆಯ ನಾನಾ ವಿಭಾಗದ ಅಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: ಐದು ವರ್ಷಗಳಲ್ಲಿ ಗಂಗಾವತಿ ಪ್ಯಾರಿಸ್ ರೀತಿ ಅಭಿವೃದ್ಧಿ : ಶಾಸಕ ಜಿ. ಜನಾರ್ದನ ರೆಡ್ಡಿ

Last Updated : Jun 8, 2023, 3:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.