ETV Bharat / state

ಗಂಗಾವತಿಯಿಂದ ಶ್ರೀರಾಮುಲು ಕಣಕ್ಕಿಳಿದ್ರೆ? ಜನಾರ್ದನ ರೆಡ್ಡಿ ಹೇಳಿದ್ದಿಷ್ಟು..

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಫರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಜನಾರ್ದನ ರೆಡ್ಡಿ ಬಿಡುಗಡೆ ಮಾಡಿದ್ದಾರೆ.

ಜಿ ಜನಾರ್ದನ ರೆಡ್ಡಿ
ಜಿ ಜನಾರ್ದನ ರೆಡ್ಡಿ
author img

By

Published : Feb 16, 2023, 7:38 PM IST

ಗಂಗಾವತಿ: ಅಖಾಡಕ್ಕೆ ಇಳಿದ ಮೇಲೆ ಯಾರೇ ಬಂದರೂ ಸ್ಪರ್ಧಿಸಲೇ ಬೇಕು. ಹಿಂದಕ್ಕೆ ಸರಿಯುವ ಜಾಯಮಾನ ನನ್ನದಲ್ಲ ಎಂದು ಕೆಆರ್​ಪಿಪಿ ಪಕ್ಷದ ಸಂಸ್ಥಾಪಕ ಜಿ.ಜನಾರ್ದನ ರೆಡ್ಡಿ ಹೇಳಿದರು. ಇಂದು ತಮ್ಮ ಪಕ್ಷದ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿಯನ್ನು ಕಟ್ಟಿಹಾಕಲು ಸಚಿವ ಶ್ರೀರಾಮುಲು ಗಂಗಾವತಿಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚುನಾವಣೆ ಅಖಾಡಕ್ಕಿಳಿದ ಮೇಲೆ ಯಾರೇ ಬಂದರೂ ಸ್ಪರ್ಧಿಸಲೇ ಬೇಕು ಅಲ್ಲವೇ.? ನೀರಿಗೆ ಇಳಿದ ಮೇಲೆ ಚಳಿ ಎಂದು ಹಿಂದಕ್ಕೆ ಸರಿಯುವ ಜಾಯಮಾನ ನನ್ನದಲ್ಲ. ಏನಿದ್ದರೂ ಅಖಾಡದಲ್ಲಿನ ಸ್ಪರ್ಧೆಯೇ ಅಂತಿಮ ಎಂದರು.

ನಾನು ಒಂದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದ ರೆಡ್ಡಿ, ಶ್ರೀರಾಮುಲು ವಿರುದ್ಧ ಸ್ಪರ್ಧಿಸಲು ಅಭ್ಯರ್ಥಿಯನ್ನು ನೇಮಕ ಮಾಡ್ತೀರಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ನಾನು ಏನನ್ನೂ ಹೇಳಲಾರೆ ಎಂದು ಜಾರಿಕೊಂಡರು. ಮುಂದುವರೆದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪಾ ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಧರೆಪ್ಪ ನಾಯಕ್ ಕಣಕ್ಕೆ ಇಳಿಯಲಿದ್ದಾರೆ. ಸಿರುಗುಪ್ಪ ಕ್ಷೇತ್ರ ಸೇರಿದಂತೆ ಈಗಾಗಲೇ ಕಲ್ಯಾಣ ಕರ್ನಾಟಕದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಅಧಿಕೃತ ಘೋಷಣೆ ಮಾಡಲಾಗಿದೆ. ಪಕ್ಷದಿಂದ ಸಮೀಕ್ಷೆ ಕೈಗೊಳ್ಳಲಾಗಿದ್ದು ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಆದ್ಯತೆ ನೀಡಿ ಟಿಕೆಟ್ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದು ರೆಡ್ಡಿ ಇದೇ ಸಂದರ್ಭದಲ್ಲಿ ಹೇಳಿದರು.

ಎಲ್ಲಿ, ಯಾರು ಅಭ್ಯರ್ಥಿ?: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಖಾಡದಲ್ಲಿರುವ ಅಭ್ಯರ್ಥಿಗಳ ಮಾಹಿತಿ ನೀಡಿದ ರೆಡ್ಡಿ, ಲಕ್ಷ್ಮಿಅರುಣಾ-ಬಳ್ಳಾರಿ, ಜಿ. ಜನಾರ್ದನ ರೆಡ್ಡಿ-ಗಂಗಾವತಿ, ಡಾ.ವೆಂಕಟರಮಣ-ಕನಕಗಿರಿ, ಧರೆಪ್ಪ ನಾಯಕ್-ಸಿರಗುಪ್ಪ, ಮಹೇಶ-ಹಿರಿಯೂರು, ಶ್ರೀಕಾಂತ್-ನಾಗಠಾಣಾ, ಮಲ್ಲಿಕಾರ್ಜುನ ನೆಕ್ಕಂಟಿ-ಸಿಂಧನೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದೇ ತಿಂಗಳು ಅಂತ್ಯಕ್ಕೆ ಅಥವಾ ಮುಂದಿನ ಮಾರ್ಚ್ ಮೊದಲ ವಾರದಲ್ಲಿ ಕೊಪ್ಪಳ ಜಿಲ್ಲೆಯ ಇನ್ನುಳಿದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ನನ್ನ ನಿರೀಕ್ಷೆಗೂ ಮೀರಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಜನ ಸ್ಪಂದಿಸುತ್ತಿದ್ದಾರೆ. ರಾಜ್ಯದ ಜನರಿಗೆ ಬೇಕಿರುವುದು ಯಾವುದೇ ಕೋಮು ಗಲಭೆ-ರಾಜಕೀಯ ದೊಂಬರಾಟವಲ್ಲ. ಅವರಿಗೆ ಬೇಕಿರುವುದು ಕೇವಲ ಅಭಿವೃದ್ಧಿ, ಕೋಮು ಸಾಮರಸ್ಯ ಮತ್ತು ಶಾಂತಿಯಷ್ಟೇ. ಹೀಗಾಗಿ ಈ ಮೂಲಮಂತ್ರಗಳ ಆಧಾರದ ಮೇಲೆಯೇ ಪಕ್ಷ ಸಂಘಟನೆಯಾಗುತ್ತಿರುವ ಕಾರಣಕ್ಕೆ ರಾಜ್ಯದ ನಾನಾ ಕಡೆ ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಜನರಿಂದ ಮತ್ತು ನಾನಾ ಪಕ್ಷದ ನಾಯಕರಿಂದ ನಮಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ರೆಡ್ಡಿ ಹೇಳಿದರು.

ಪಕ್ಷದ ಚಿಹ್ನೆ ಫೈನಲ್: ಕೇಂದ್ರ ಚುನಾವಣಾ ಆಯೋಗದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿದೆ. ಇನ್ನೊಂದೆರಡು ದಿನದಲ್ಲಿ ಪಕ್ಷದ ಚಿಹ್ನೆಯ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಕೆಲವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕೃತ ನೋಂದಣಿಯಾಗಿಲ್ಲ ಎಂದು ವದಂತಿ ಹಬ್ಬಿಸಿದ್ದರು. ಅದೆಲ್ಲಾ ವದಂತಿಗೆ ಸೀಮಿತ. ಇದೀಗ ಕೇಂದ್ರದಿಂದಲೇ ನೋಂದಣಿಯ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದರು.

ಇದನ್ನೂ ಓದಿ: ರೆಡ್ಡಿಯ ಕೆಆರ್​ಪಿಪಿ ಪಕ್ಷಕ್ಕೆ ಜಿಲ್ಲಾಮಟ್ಟದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.