ETV Bharat / state

ಬೆಳೆ ಸಮೀಕ್ಷೆ ಅಪ್ಲೋಡ್​​ ಮಾಡುವ ಬಗ್ಗೆ ಕೃಷಿ ವಿಜ್ಞಾನಿಗಳಿಂದ ಮಾಹಿತಿ - ಫಾರ್ಮರ್ ಕ್ರಾಪ್ ಸರ್ವೇ ಆ್ಯಪ್ 2020-21

ಕುಷ್ಟಗಿ ತಾಲೂಕಿನ ಶಾಖಾಪೂರ ಹಾಗೂ ಜೂಲಕಟ್ಟಿ ಗ್ರಾಮದ ರೈತರ ಜಮೀನುಗಳಲ್ಲಿ ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ( ಫಾರ್ಮರ್ ಕ್ರಾಪ್ ಸರ್ವೇ ಆ್ಯಪ್ 2020-21) ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಸರ್ವೇ ಆ್ಯಪ್ ಕುರಿತು ಮಾಹಿತಿ
ಸರ್ವೇ ಆ್ಯಪ್ ಕುರಿತು ಮಾಹಿತಿ
author img

By

Published : Aug 21, 2020, 11:50 AM IST

ಕುಷ್ಟಗಿ (ಕೊಪ್ಪಳ): ರೈತರು ಸ್ವಯಂ ಬೆಳೆ ಸಮೀಕ್ಷೆ ಮಾಹಿತಿ ಅಪ್ಲೋಡ್​​​ ಮಾಡುವ ಸಂದರ್ಭದಲ್ಲಿ ಗೊಂದಲಗಳಿದ್ದರೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳ ನೆರವು ಪಡೆಯಬೇಕು ಎಂದು ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ಕೃಷಿ ವಿಜ್ಞಾನಿ ಡಾ. ಬದ್ರಿ ಪ್ರಸಾದ್ ಹೇಳಿದರು.

ತಾಲೂಕಿನ ಶಾಖಾಪೂರ ಹಾಗೂ ಜೂಲಕಟ್ಟಿ ಗ್ರಾಮದ ರೈತರ ಜಮೀನುಗಳಲ್ಲಿ ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ( ಫಾರ್ಮರ್ ಕ್ರಾಪ್ ಸರ್ವೇ ಆ್ಯಪ್ 2020-21) ಕುರಿತು ರೈತರಿಗೆ ಮಾಹಿತಿ ನೀಡಿದ ಅವರು, ಬೆಳೆದ ಬೆಳೆಯ ವಿವರಗಳನ್ನು ನೋಂದಣಿ ಮಾಡಿಕೊಳ್ಳಬೇಕು. ರೈತರು ನಿಗದಿತ ಸಮಯದೊಳಗೆ ಮಾಹಿತಿ ಅಪ್ಲೋಡ್ ಮಾಡದಿದ್ದರೆ ಸರ್ಕಾರ ನಿಯೋಜಿಸಲ್ಪಟ್ಟ ಪಿಆರ್ ಗಳಿಗೆ ಸಹಕರಿಸಿ ಬೆಳೆಯ ವಿವರ ದಾಖಲಿಸಬೇಕು. ಸ್ಮಾರ್ಟ್ ಫೋನ್ ಇಲ್ಲದಿದ್ದರೆ ತಮಗೆ ಪರಿಚಯ ಇರುವವರ ಸ್ಮಾರ್ಟ್ ಫೋನ್ ಮೂಲಕ ಬೆಳೆಯ ವಿವರ ದಾಖಲಿಸಬಹುದಾಗಿದೆ ಎಂದರು.

ಈ ವೇಳೆ, ವಿಜ್ಞಾನಿ ಡಾ. ನಾಗೇಶ, ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ಬಸವರಾಜ ಪಾಟೀಲ್​, ರೈತ ರಮೇಶ ಕೊನಸಾಗರ, ಶಿವು ಕೌದಿ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.