ETV Bharat / state

ಅಂಜನಾದ್ರಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಜನಾರ್ದನ ರೆಡ್ಡಿ - ಅಂಜನಾದ್ರಿಯ ಧಾರ್ಮಿಕ ಪಾವಿತ್ರ್ಯತೆ

''ಹಂಪಿಯಿಂದ ಆನೆಗೊಂದಿಯನ್ನು ಕೈಬಿಡುವಂತೆ ಒತ್ತಾಯಿಸಿ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ಮುಖ್ಯವಾಗಿ ಅಂಜನಾದ್ರಿಯಲ್ಲಿ ಧಾರ್ಮಿಕ ಪಾವಿತ್ರ್ಯತೆ ಉಳಿಸುವ ಸಂಬಂಧ ಗ್ರೀನ್ ಪೊಲೀಸ್ (ಹಸಿರು ಪೊಲೀಸ್) ವ್ಯವಸ್ಥೆ ಜಾರಿಗೆ ತರುವ ಉದ್ದೇಶವಿದೆ'' ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.

Janardhana Reddy
ಶಾಸಕ ಜನಾರ್ದನ ರೆಡ್ಡಿ
author img

By

Published : Jun 26, 2023, 7:48 PM IST

ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿದರು

ಗಂಗಾವತಿ (ಕೊಪ್ಪಳ): ''ಹಿಂದೂಗಳ ಪಾವಿತ್ರ ಧಾರ್ಮಿಕ ತಾಣ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ. ಈ ಭಾಗದಲ್ಲಿ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ಸುತ್ತಲೂ ನಡೆಯುತ್ತಿರುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲಾಗುವುದು'' ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಆನೆಗೊಂದಿ ಸುತ್ತಲೂ ಇದ್ದ ರೆಸಾರ್ಟ್​ ಹಾಗೂ ಹೋಂ ಸ್ಟೇಗಳ ತೆರವು ಕಾರ್ಯಾಚರಣೆಯಿಂದ ಹಲವರ ಬದುಕು ಬೀದಿಪಾಲಾಗಿದೆ. ಈ ಬಗ್ಗೆ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡಿ ಅವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಲಾಗುವುದು. ಮುಖ್ಯವಾಗಿ ಆನೆಗೊಂದಿ ಮತ್ತು ಇತರೆ ಗ್ರಾಮಗಳನ್ನು ಅವೈಜ್ಞಾನಿಕವಾಗಿ ಹಂಪಿಯೊಂದಿಗೆ ಜೋಡಣೆ ಮಾಡಲಾಗಿದೆ ಎಂದರು.

ಗ್ರೀನ್ ಪೊಲೀಸ್ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶ: ಹಂಪಿಯಿಂದ ಆನೆಗೊಂದಿಯನ್ನು ಕೈಬಿಡುವಂತೆ ಒತ್ತಾಯಿಸಿ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ಮುಖ್ಯವಾಗಿ ಅಂಜನಾದ್ರಿಯಲ್ಲಿ ಧಾರ್ಮಿಕ ಪಾವಿತ್ರ್ಯತೆ ಉಳಿಸುವ ಸಂಬಂಧ ಗ್ರೀನ್ ಪೊಲೀಸ್ (ಹಸಿರು ಪೊಲೀಸ್) ವ್ಯವಸ್ಥೆ ಜಾರಿಗೆ ತರುವ ಉದ್ದೇಶವಿದೆ. ಈ ಗ್ರೀನ್ ಪೊಲೀಸ್ ಹೆಸರಿಗೆ ತಕ್ಕಂತೆ ಹಸಿರು ಬಣ್ಣದ ಉಡುಗೆ ತೊಡುತ್ತಾರೆ. ಪ್ರವಾಸಿಗರಿಗೆ ನೆರವು ನೀಡುವುದರ ಜೊತೆಗೆ ಈ ಪೊಲೀಸರು ಅಂಜನಾದ್ರಿ ಸುತ್ತಲೂ ನಡೆಯುವ ಅಕ್ರಮ ಚಟುವಟಿಕೆಗೆಗಳಿಗೆ ಕಡಿವಾಣ ಹಾಕುತ್ತಾರೆ'' ಎಂದು ಅವರು ತಿಳಿಸಿದರು.

ನಿಷೇಧಿತ ವಲಯ: ''ಅಂಜನಾದ್ರಿಯ ಧಾರ್ಮಿಕ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ದೇಗುಲದ ಸುತ್ತಲೂ ಇಂತಿಷ್ಟು ಕಿಲೋ ಮೀಟರ್ ನಿಷೇಧಿತ ವಲಯ ಎಂದು ಘೋಷಣೆ ಮಾಡಬೇಕಿದೆ'' ಎಂದು ಶಾಸಕ ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು. ''ಧಾರ್ಮಿಕ ತಾಣದ ಸುತ್ತಲೂ ಈ ಹಿಂದೆ ರೆಸಾರ್ಟ್​ಗಳಲ್ಲಿ ಅಕ್ರಮ ಚುಟುವಟಿಕೆಗಳು ನಡೆಯುತ್ತಿದ್ದವು ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಅದರ ಅನ್ವಯ ಅಕ್ರಮ ಚುವಟಿಕೆಗಳಾದ ಗಾಂಜಾ, ಮದ್ಯ ಮತ್ತು ಮಾಂಸ ಮಾರಾಟ ದಂಧೆಗಳನ್ನು ಸ್ಥಗಿತಗೊಳಿಸಲಾಯಿತು. ಮುಖ್ಯವಾಗಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶಕ್ಕೆ ತಲೆ ಎತ್ತಿದ ರೆಸಾರ್ಟ್​ಗಳ ಪೈಕಿ ಬಹುತೇಕವುಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡುತ್ತಿಲ್ಲ. ಕೇವಲ ವಿದೇಶಿಗರಿಗೆ, ಟೆಕ್ಕಿಗಳಿಗೆ ಮತ್ತು ವೀಕೆಂಡ್ ಮೋಜು ಮಸ್ತಿ ಮಾಡಲು ಬರುವ ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು'' ಎಂದು ತಿಳಿಸಿದರು.

ಕಾನೂನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ: ''ಅಲ್ಲದೇ ಬಹುತೇಕ ರೆಸಾರ್ಟ್​ಗಳಲ್ಲಿ ಊಟ, ಚಹಾ, ಪಾನೀಯ, ವಸತಿ ಸೇರಿದಂತೆ ನಾಲ್ಕು ಪಟ್ಟು ಹಣ ಹೆಚ್ಚಿಗೆ ವಸೂಲಿ ಮಾಡಲಾಗುತ್ತಿತ್ತು ಎನ್ನುವ ಆರೋಪ ಜನರಿಂದ ಕೇಳಿಬರುತ್ತಿದೆ. ಹೀಗಾಗಿ ಮತ್ತೆ ಅಲ್ಲಿ ರೆಸಾರ್ಟ್​ಗಳಿಗೆ ಅವಕಾಶ ಕಲ್ಪಿಸಿಕೊಡಬೇಕೆ ಅಥವಾ ಬೇಡವೆ ಎನ್ನುವುದರ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಯಾವುದೇ ಒತ್ತಡ ಬಂದರೂ ಕಾನೂನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಇದರೊಂದಿಗೆ ಅಂಜನಾದ್ರಿಯಲ್ಲಿ ಧಾರ್ಮಿಕ ಪಾವಿತ್ರ್ಯತೆ ಉಳಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು'' ಎಂದು ಜನಾರ್ದನ ರೆಡ್ಡಿ ಹೇಳಿದರು.

ಇದನ್ನೂ ಓದಿ: ನಾನು ವೋಟು ಕೊಡದವರಿಗೂ ಸಿಎಂ, ಕಾಂಗ್ರೆಸೇತರ ಶಾಸಕರಿಗೂ ಸಿಎಂ: ಸಂವಿಧಾನ ಇಲ್ಲವಾಗಿದ್ದರೆ ನಾನು ಕುರಿ ಕಾಯುತ್ತಿರಬೇಕಿತ್ತು: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.