ಕೊಪ್ಪಳ : ನೇಣು ಬಿಗಿದುಕೊಂಡು ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾಗ್ಯನಗರದಲ್ಲಿ ಜರುಗಿದೆ.
ದಾವಣಗೆರೆ ಮೂಲದ ಪವಿತ್ರ (24) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ ಎಂದು ಗುರುತಿಸಲಾಗಿದೆ. ಕಳೆದ 2 ವರ್ಷದ ಹಿಂದೆಯಷ್ಟೇ ಪವಿತ್ರ ಎಂಬುವರೊಂದಿಗೆ ವಿವಾಹವಾಗಿದ್ದರು.
ಮೂರು ತಿಂಗಳಿನಿಂದ ಪವಿತ್ರ ಹಾಗೂ ಮಂಜುನಾಥ್ ಕೊಪ್ಪಳದಲ್ಲಿ ವಾಸವಾಗಿದ್ದರು. ಇವರಿಗೆ 9 ತಿಂಗಳ ಮಗುವಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.