ಕೊಪ್ಪಳ : ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬೋಂಗಾ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್ ಹಾಗೂ ಕೇಸಕ್ಕಿ ಹಂಚಿನಾಳ ಬಳಿಯಿರುವ ತುಂಗಭದ್ರಾ ಕಾಲುವೆಯ ಬೋಂಗಾ ಬಿದ್ದಿದೆ. ಕಳೆದ ಎರಡು ದಿನದ ಹಿಂದಷ್ಟೇ ಎಡದಂಡೆ ಕಾಲುವೆಗೆ ನೀರು ಹರಿಸಲಾಗಿದೆ. ಈಗ ಇಲ್ಲಿ ಕಾಲುವೆಗೆ ನಿರ್ಮಿಸಿದ ಸೇತುವೆ ಒಳಗಿಂದ ಬೋಂಗಾ ಬಿದ್ದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಸೇತುವೆಯ ಭಾಗದಲ್ಲಿ ಸುಮಾರು ಕಡೆ ರಂಧ್ರವಾಗಿ ನೀರು ಪೋಲಾಗುತ್ತಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.