ETV Bharat / state

ಹನುಮಮಾಲಾ ವಿರಮಣ ಕಾರ್ಯಕ್ರಮ: ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸಚಿವ ತಂಗಡಗಿ ಸೂಚನೆ - ವಿದ್ಯುತ್ ವ್ಯವಸ್ಥೆ

ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಡಿ.24ರಂದು ನಡೆಯಲಿರುವ ಹನುಮಮಾಲಾ ವಿರಮಣ ಕಾರ್ಯಕ್ರಮದ ನಿಮಿತ್ತ ಸಚಿವ ಶಿವರಾಜ ತಂಗಡಗಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

meeting of district officials was held.
ಸಚಿವ ಶಿವರಾಜ ತಂಗಡಗಿ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದರು.
author img

By ETV Bharat Karnataka Team

Published : Dec 17, 2023, 10:49 PM IST

Updated : Dec 17, 2023, 10:57 PM IST

ಶಿವರಾಜ ತಂಗಡಗಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಗಂಗಾವತಿ(ಕೊಪ್ಪಳ): ಡಿ.24ರಂದು ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ನಡೆಯುವ ಹನುಮಮಾಲೆ ವಿರಮಣ ಕಾರ್ಯಕ್ರಮದ ಯಶಸ್ಸಿಗೆ ಈಗಾಗಲೇ ಪೂರ್ವಸಿದ್ಧತೆ ನಡೆಯುತ್ತಿದ್ದು, ಸಮಿತಿಗಳನ್ನು ರಚಿಸಿದ್ದೀರಿ. ಈ ಸಮಿತಿಗಳು ಕೇವಲ ಕಾಗದಕ್ಕೆ ಸೀಮಿತವಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದ ತಾಲೂಕು ಪಂಚಾಯಿತಿ ಆವರಣದ ಮಂಥನ ಸಭಾಂಗಣದಲ್ಲಿ ಭಾನುವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಸಮಿತಿಗಳನ್ನು ರಚಿಸಿದರೆ ಸಾಲದು. ಅಧಿಕಾರಿಗಳು ಮೂರು ದಿನಗಳ ಕಾಲ ಅಲ್ಲೇ ಇದ್ದು ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು. ಮುಖ್ಯವಾಗಿ, ಭಕ್ತಾದಿಗಳಿಗೆ ಪ್ರಸಾದಕ್ಕಿಂತ ಕುಡಿಯುವ ನೀರು ಮತ್ತು ಸ್ನಾನಕ್ಕೆ ನೀರು ಒದಗಿಸುವ ಕೆಲಸ ಮಾಡಬೇಕು. ಕಳೆದ ಬಾರಿಗಿಂತ ಈ ಬಾರಿ ಸರ್ಕಾರ ಅದ್ಧೂರಿಯಾಗಿ ಹನುಮಮಾಲೆ ವಿರಮಣ ಹಮ್ಮಿಕೊಂಡಿದೆ ಎಂದರು.

ರಾಜ್ಯದ ನಾನಾ ಜಿಲ್ಲೆಗಳಿಂದ ಬರುವ ಭಕ್ತರಿಗೆ ವಸತಿ, ಊಟ, ಶೌಚಾಲಯ, ಸ್ನಾನ ಸೇರಿದಂತೆ ಯಾವುದೇ ಸೌಲಭ್ಯದ ಕೊರತೆಯಾಗಬಾರದು. ಪಾರ್ಕಿಂಗ್ ವ್ಯವಸ್ಥೆ ಸೇರಿ ಆರೋಗ್ಯ ಸೌಲಭ್ಯವನ್ನು ಕಲ್ಪಿಸಬೇಕು. ಸಮಿತಿಗಳಿಗೆ ನಿಯೋಜಿತ ಅಧಿಕಾರಿಗಳು ದಿನದ 24 ಗಂಟೆಗಳ ಕಾಲವೂ ಲಭ್ಯವಿರುವಂತೆ ದಿನದ 8 ಗಂಟೆಗಳ ಕಾಲ ಶಿಫ್ಟ್ ಆಧಾರದಲ್ಲಿ ಕೆಲಸ ಮಾಡಬೇಕು. ಹನುಮ ಜಯಂತಿಯಂದು ಯಾವುದೇ ಸಂದರ್ಭದಲ್ಲಿ ನಾನು ಭೇಟಿ ನೀಡಲಿದ್ದು, ಅವ್ಯವಸ್ಥೆ ಕಂಡುಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಂಜನಾದ್ರಿ ಗಂಗಾವತಿ ತಾಲೂಕು ಕೊಪ್ಪಳ ಜಿಲ್ಲೆಯಲ್ಲಿದೆ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಇದಕ್ಕಾಗಿ ಜಿಲ್ಲಾಡಳಿತದಿಂದ ಅಲ್ಲಲ್ಲಿ ಬ್ಯಾನರ್ ಹಾಕಿಸಿ. ಅಂಜನಾದ್ರಿ ಕೊಪ್ಪಳ ಜಿಲ್ಲೆಯಲ್ಲಿದೆ. ಆದರೆ ಈಗಾಗಲೇ ಅಂಜನಾದ್ರಿಯನ್ನು ಹಂಪಿ ಎಂತಲೂ ಹೇಳಿ ವಿಜಯನಗರ ಜಿಲ್ಲೆಯೆಂದು ಹೈಜಾಕ್ ಮಾಡುವ ಪ್ರಯತ್ನ ನಡೆದಿದೆ. ಹೀಗಾಗಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ತಂಗಡಗಿ ಸೂಚನೆ ನೀಡಿದರು.

ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಭದ್ರತೆ, ಪಾರ್ಕಿಂಗ್ ವ್ಯವಸ್ಥೆ, ಆರೋಗ್ಯ, ಆಹಾರ, ಸಾರಿಗೆ ಸೇರಿದಂತೆ ನಾನಾ ಸಮಿತಿಗಳಿಂದ ಕೈಗೊಂಡಿರುವ ಸಿದ್ಧತೆಯ ಬಗ್ಗೆ ಆಯಾ ಸಮಿತಿ ಮುಖ್ಯಸ್ಥ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಅತುಲ್ ಕುಮಾರ್, ಜಿ.ಪಂ.ಸಿಇಒ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡೆ, ಅಪರ ಜಿಲ್ಲಾಧಿಕಾರಿ ಸಾವಿತ್ರಿಕಡಿ, ಸಹಾಯಕ ಆಯುಕ್ತ ಮಹೇಶ ಮಾಲಗಿತ್ತಿ ಸಭೆಯಲ್ಲಿದ್ದರು.

ಇದನ್ನೂಓದಿ: ತಾರತಮ್ಯ ನಿವಾರಣೆ ನ್ಯಾಯಾಂಗ ವ್ಯವಸ್ಥೆಯ ಮುಖ್ಯ ಗುರಿಯಾಗಬೇಕು: ಸಿಜೆಐ ಡಿ.ವೈ.ಚಂದ್ರಚೂಡ್

Last Updated : Dec 17, 2023, 10:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.