ETV Bharat / state

ಅಮೆರಿಕದಿಂದ ಆಗಮಿಸಿದ ಗಂಗಾವತಿ ಯುವತಿಗೆ ಕೋವಿಡ್ ಸೋಂಕು​

ಅಮೆರಿಕದಿಂದ ಮರಳಿದ ಗಂಗಾವತಿಯ ಯುವತಿಯಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಯುವತಿಯನ್ನು ಹೋಂ ಕ್ವಾರಂಟೈನ್​ ಮಾಡಲಾಗಿದೆ.

girl-returned-from-america-tested-covid-positive
ಅಮೆರಿಕಾದಿಂದ ಬಂದ ಗಂಗಾವತಿ ಯುವತಿಗೆ ಕೊರೊನಾ ಪೊಸಿಟಿವ್​
author img

By

Published : Dec 27, 2022, 9:53 PM IST

ಗಂಗಾವತಿ : ಅಮೆರಿಕದಿಂದ ಆಗಮಿಸಿದ ಯುವತಿಯಲ್ಲಿ ಕೋವಿಡ್ 19 ಕಂಡುಬಂದಿದೆ. ತಾಲ್ಲೂಕಿನ ಬಸವಪಟ್ಟಣದ ಯುವತಿಯಲ್ಲಿ ಸೋಂಕು ಕಂಡುಬಂದಿದ್ದು, ಮೂರನೇ ಅಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ.

ಯುವತಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಪಾಸಿಟಿವ್ ಬಂದಿದ್ದು ಹೋಂ ಕ್ವಾರಂಟೈನ್‌ನಲ್ಲಿರಲು ಅಧಿಕಾರಿಗಳು ಸೂಚಿಸಿದ್ದಾರೆ. ಆಕೆಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ಬಿಎಫ್-7 ಉಪತಳಿ ನಿಯಂತ್ರಣಕ್ಕೆ ಸರ್ಕಾರ ಸರ್ವ ಸನ್ನದ್ದ: ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.