ಗಂಗಾವತಿ : ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಸಾರಿಗೆ ಬಸ್ ಸೌಲಭ್ಯವಿಲ್ಲದ ಪರಿಣಾಮ ನಿತ್ಯ ಸಾವಿರಾರು ವಿದ್ಯಾರ್ಥಿಗಳು ತಮ್ಮ ಜೀವದ ಹಂಗು ತೊರೆದು ವಾಹನದ ಬಾಗಿಲಲ್ಲಿ ಜೋತಾಡುತ್ತಾ ಪ್ರಯಾಣ ಮಾಡುವ ಸ್ಥಿತಿ ಎದುರಾಗಿದೆ.
ನಗರದಿಂದ 3 ಕಿ.ಮೀ. ಅಂತರ ಇರುವ ಎಸ್‌ಕೆಎನ್‌ಜಿ ಕಾಲೇಜಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಸುಮಾರು 800-900 ವಿದ್ಯಾರ್ಥಿಗಳು ಸಾರಿಗೆ ಬಸ್ ಅವಲಂಬಿಸಿದ್ದಾರೆ.
ಆದರೆ, ಸಮಯಕ್ಕೆ ಸರಿಯಾಗಿ ಬಸ್ಗಳಿಲ್ಲದ ಕಾರಣ ಸಿಕ್ಕ ಒಂದೆರಡು ಬಸ್ಗಳಲ್ಲಿ ವಿದ್ಯಾರ್ಥಿಗಳು ಸರ್ಕಸ್ ಮಾಡುತ್ತಾ ಹೋಗುತ್ತಿದ್ದಾರೆ. ಹೆಚ್ಚುವರಿ ಬಸ್ ಓಡಿಸುವಂತೆ ಕಾಲೇಜಿನ ಪ್ರಾಚಾರ್ಯರಿಂದ ಮನವಿ ಅಥವಾ ಕಾಲೇಜಿನ ಆಡಳಿತ ಮಂಡಳಿತ ಅಧ್ಯಕ್ಷ ಶಾಸಕ ಪರಣ್ಣ ಮುನವಳ್ಳಿ ಸಾರಿಗೆ ಇಲಾಖೆಗೆ ಯಾವುದೇ ಸೂಚನೆ ನೀಡದಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗ್ತಿದೆ.