ETV Bharat / state

ಗಂಗಾವತಿ : ಅಪ್ಪು ಜನ್ಮದಿನ ಆಚರಣೆಗೆ ಅಭಿಮಾನಿಗಳಿಂದ ಭರ್ಜರಿ ಸಿದ್ಧತೆ - ಜೇಮ್ಸ್ ಚಿತ್ರ ಬಿಡುಗಡೆ

ಕನ್ನಡದ ಪ್ರತಿಭಾವಂತನ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಜನ್ಮ ದಿನಾಚರಣೆ ಅಂಗವಾಗಿ ಗಂಗಾವತಿಯಲ್ಲಿ ಅಭಿಮಾನಿಗಳು ಮಂದಿರ ನಿರ್ಮಾಣ ಮಾಡುವ ಮೂಲಕ ನೆಚ್ಚಿನ ಜನ್ಮದಿನವನ್ನ ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ..

ಅಪ್ಪು ಜನ್ಮದಿನ ಆಚರಣೆಗೆ ಭರ್ಜರಿ ಸಿದ್ಧತೆ
ಅಪ್ಪು ಜನ್ಮದಿನ ಆಚರಣೆಗೆ ಭರ್ಜರಿ ಸಿದ್ಧತೆ
author img

By

Published : Mar 16, 2022, 2:06 PM IST

ಗಂಗಾವತಿ : ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಪುನಿತ್ ರಾಜಕುಮಾರ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಲು ಅಭಿಮಾನಿಗಳು ವಾರದಿಂದ ಪೂರ್ವ ಸಿದ್ಧತೆ ನಡೆಸಿದ್ದಾರೆ.

ಚಿತ್ರನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ 'ಜೇಮ್ಸ್' ಅವರ (ಮಾ.17) ಜನ್ಮದಿನವೇ ಬಿಡುಗಡೆಗೆ ಸಿದ್ಧವಾಗಿದೆ. ಹಾಗಾಗಿ, ಇಲ್ಲಿನ ಅಭಿಮಾನಿಗಳು ಅಪ್ಪು ಸಿನಿಮಾವನ್ನ ಸ್ವಾಗತಿಸಲು ಶಿವೆ ಚಿತ್ರಮಂದಿರದ ಬಳಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಪ್ಪು ಜನ್ಮದಿನ ಆಚರಣೆಗೆ ಭರ್ಜರಿ ಸಿದ್ಧತೆ

ಶಿವೆ ಚಿತ್ರಮಂದಿರಕ್ಕೆ ತೆರಳುವ ರಸ್ತೆಯ ಎರಡೂ ಬದಿ, ಚಿತ್ರಮಂದಿರದ ಆವರಣ, ವಾಲ್ಮೀಕಿ ವೃತ್ತ, ಮಲ್ಲಿಕಾರ್ಜುನ ಮಠ, ನಗರದ ಪ್ರಮುಖ ರಸ್ತೆ, ವೃತ್ತ, ಕಾಲೋನಿ ಸೇರಿದಂತೆ ಹಲವೆಡೆ ಬ್ಯಾನರ್‌ ಹಾಕಲಾಗಿದೆ.

ಅಷ್ಟೇ ಅಲ್ಲ, ಶಿವೆ ಚಿತ್ರ ಮಂದಿರದ ಆವರಣದಲ್ಲಿ ತಾತ್ಕಾಲಿಕ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಬಹುತೇಕ ಸಿದ್ಧತೆ ಪೂರ್ಣಗೊಂಡಿದ್ದು, ಮಾರ್ಚ್​ 17ರಂದು ಮಂದಿರದಲ್ಲಿ ಪುನಿತ್ ಭಾವಚಿತ್ರ ಅಥವಾ ಪುತ್ಥಳಿ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: ಚುನಾವಣಾ ರಾಜಕೀಯದ ಮೇಲೆ ಫೇಸ್​ಬುಕ್​, ಟ್ವಿಟರ್​ ಪ್ರಭಾವ ಕೊನೆಗಾಣಿಸಿ: ಸೋನಿಯಾ ಗಾಂಧಿ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.