ಗಂಗಾವತಿ: ನಗರದ ವಿಜಯವೃಂದ ಮತ್ತು ಪ್ರಶಾಂತ ನಗರದ ಗಣೇಶನ ಶೋಭಾ ಯಾತ್ರೆ ಅದ್ಧೂರಿಯಾಗಿ ಜರುಗಿತು. ಮೆರವಣಿಗೆಯ ಡಿ ಜೆ ಶಬ್ದಕ್ಕೆ ಮಲಗಿದ್ದವರು ಎದ್ದು ಬಂದು ಹೆಜ್ಜೆ ಹಾಕಿದರು.
ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಜಯವೃಂದ ಹಾಗೂ ಪ್ರಶಾಂತ ನಗರದ ಗಣೇಶನ ನಿಮಜ್ಜನ ಮೆರವಣಿಗೆ ಏಕಕಾಲಕ್ಕೆ ಗಣೇಶ ವೃತ್ತ ತಲುಪುತ್ತಿದ್ದಂತೆ ಎರಡು ಮೆರವಣಿಗೆಯ ಡಿಜೆ ಸೌಂಡ್ಗೆ ಸಾವಿರಾರು ಯುವಕರು ನೃತ್ಯ ಮಾಡುತ್ತಿದ್ದರೆ, ಮನೆಯಲ್ಲಿ ಮಲಗಿದ್ದ ಯುವಕರು ಓಡೋಡಿ ಬಂದು ನೃತ್ಯಕ್ಕೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಗಸ್ತಿಗೆ ನಿಯೋಜಿತರಾಗಿದ್ದ ಪೊಲೀಸರು ಯುವಪಡೆ ನಿಯಂತ್ರಿಸುವಲ್ಲಿ ಹೈರಾಣಾದರು.