ಕೊಪ್ಪಳ: ಭಾರತಕ್ಕೆ ಫ್ರಾನ್ಸ್ ರಾಯಭಾರಿ ಆಗಿರುವ ಎಮ್ಯಾನುಯೆಲ್ ಲೆನೈನ್ ಅವರು ತಮ್ಮ ಪತ್ನಿ ಜೊತೆ ಇಂದು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿನ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು.
ಲೆನೈನ್ ದಂಪತಿ ಆನೆಗೊಂದಿ ಹಾಗೂ ಹಂಪಿಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಭಾಗವಾಗಿ ಇಂದು ಹನುಮನ ಜನ್ಮ ಸ್ಥಳವಾಗಿರುವ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದರು. ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ದಂಪತಿ, ದೇವರ ಆಶೀರ್ವಾದ ಪಡೆದುಕೊಂಡರು.

ಇದನ್ನೂ ಓದಿ: ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ.. ಇತಿಹಾಸ ತಜ್ಞ ಕೊಟ್ನೇಕಲ್ ಪುಸ್ತಕದಲ್ಲಿ ಉಲ್ಲೇಖ
ನೆಲಮಟ್ಟದಿಂದ ಸುಮಾರು 500 ಅಡಿ ಎತ್ತರದಲ್ಲಿರುವ ಅಂಜನಾದ್ರಿ ಬೆಟ್ಟದ ರಮಣೀಯ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡ ದಂಪತಿ ಸುಮಾರು ಒಂದು ಗಂಟೆ ಕಾಲ ಅಲ್ಲಿಯೇ ಕಳೆದರು.
