ETV Bharat / state

ನಗರಸಭೆ ಪೌರಾಯುಕ್ತರ ಫೋರ್ಜರಿ ಸಹಿ: ಮಿಠಾಯಿಗಾರ ಹನುಮಂತಯ್ಯ ಮೇಲೆ ಎಫ್ಐಆರ್ - gangavati koppala latest news

ನಗರಸಭೆಯ ಪೌರಾಯುಕ್ತ ಕೆ.ಸಿ. ಗಂಗಾಧರ ಅವರ ಸಹಿ ಫೋರ್ಜರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೂಕ್ತ ಕ್ರಮ ಕೈಗೊಳ್ಳಲು ಕೆ.ಸಿ. ಗಂಗಾಧರ ದೂರು ನೀಡಿದ್ದಾರೆ. ಅಸಲಿಗೆ ತಾವು ಸ್ಪಷ್ಟ ಕನ್ನಡದಲ್ಲಿ ಸಹಿ ಮಾಡುತ್ತಿದ್ದು, ಫೋರ್ಜರಿ ಮಾಡಿರುವ ದಾಖಲೆಯಲ್ಲಿ ಇಂಗ್ಲಿಷ್​​ನಲ್ಲಿ ಸಹಿ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Municipal Council forgery signature case: FIR on Hanumanthaiah
ನಗರಸಭೆ ಪೌರಾಯುಕ್ತರ ಫೋರ್ಜರಿ ಸಹಿ: ಮಿಠಾಯಿಗಾರ ಹನುಮಂತಯ್ಯನವರ ಮೇಲೆ ಎಫ್ಐಆರ್
author img

By

Published : May 28, 2020, 7:45 PM IST

ಗಂಗಾವತಿ: ನಗರಸಭೆಯ ಪೌರಾಯುಕ್ತ ಕೆ.ಸಿ. ಗಂಗಾಧರ ಅವರ ಸಹಿಯನ್ನೇ ಫೋರ್ಜರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿದಂತೆ ನಗರದ ಉದ್ಯಮಿ ಹಾಗೂ ಲೋಕೋಪಯೋಗಿ ಇಲಾಖೆಯ ನಂಬರ್-1 ಕಂಟ್ಯ್ರಾಕ್ಟರ್ ಮಿಠಾಯಿಗಾರ ಹನುಮಂತಯ್ಯ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.

ಕೆ.ಸಿ. ಗಂಗಾಧರ

ಸ್ವತಃ ನಗರಸಭೆಯ ಪೌರಾಯುಕ್ತ ಕೆ.ಸಿ. ಗಂಗಾಧರ, ನಗರಠಾಣೆಗೆ ತೆರಳಿ ನನ್ನ ಸಹಿ ನಕಲಿ ಮಾಡಿ ಕ್ರಿಮಿನಲ್ ಅಪರಾಧ ಎಸಗಿದ್ದಾರೆ. ಹೀಗಾಗಿ ಗುತ್ತಿಗೆದಾರ ಮತ್ತು ಅದಕ್ಕೆ ಸಹಕರಿಸಿದ ನಗರಸಭೆಯ ಇಂಜಿನಿಯರ್ ಅವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು.

ಅಸಲಿಗೆ ತಾನು ಸ್ಪಷ್ಟ ಕನ್ನಡದಲ್ಲಿ ಸಹಿ ಮಾಡುತ್ತಿದ್ದು, ಫೋರ್ಜರಿ ಮಾಡಿರುವ ದಾಖಲೆಯಲ್ಲಿ ಇಂಗ್ಲಿಷ್​​ನಲ್ಲಿ ಸಹಿ ಇದೆ. ನೀರಾವರಿ ಇಲಾಖೆಯಲ್ಲಿನ ಕಾಮಗಾರಿಗೆ ಅರ್ಹತಾ ಪ್ರಮಾಣಪತ್ರ ಪಡೆಯುವ ಉದ್ದೇಶಕ್ಕೆ ನಕಲಿ ಸಹಿ ಮಾಡಲಾಗಿದೆ ಎಂದು ಪೌರಾಯುಕ್ತರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.