ಗಂಗಾವತಿ: ಅನಧಿಕೃತ ಜೂಜಾಟದ ಕೇಂದ್ರದ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಜಪ್ತಿಯಾದ 17 ಐಷಾರಾಮಿ ಕಾರುಗಳು ಕಳೆದ ಮೂರು ವಾರದಿಂದ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಧೂಳು ಹಿಡಿಯುತ್ತಿದ್ದು, ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣ ಕಾಣಿಸುತ್ತಿಲ್ಲ.
ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಠಾಣೆಯಲ್ಲಿಯೇ ಜಾಮೀನು ನೀಡಲಾಗಿದೆ. ಆದರೆ ಜಪ್ತಿಯಾದ ವಾಹನಗಳಿಗೆ ಕಡ್ಡಾಯವಾಗಿ ನ್ಯಾಯಾಲಯಗಳ ಮೂಲಕವೇ ಜಾಮೀನು ಮಂಜೂರಾಗಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಾರ್ಚ್ 22 ರಿಂದ ಉಂಟಾದ ಲಾಕ್ಡೌನ್ ಪರಿಣಾಮದಿಂದ ನ್ಯಾಯಾಲಯದ ಬಹುತೇಕ ಕಲಾಪಗಳು ಸ್ಥಗಿತಗೊಂಡಿವೆ. ಮರು ಆರಂಭಕ್ಕೆ ಇನ್ನೆರಡು ತಿಂಗಳು ಹಿಡಿಯಬಹುದು ಎನ್ನಲಾಗಿದ್ದು, ಅಲ್ಲಿವರೆಗೂ ಐಷಾರಾಮಿ ಕಾರುಗಳು ಮೂಲೆ ಸೇರಿ ಧೂಳು ಹಿಡಿಯುತ್ತಿವೆ.
ಕಾರುಗಳ ಪೈಕಿ ದುಬಾರಿ ಬೆಲೆಯ ಸ್ಕೋಡಾ, ಇನ್ನೊವಾ, ಫಾರ್ಚೂನರ್, ಹೊಂಡಾ ಸಿಟಿ, ಟೊಯೆಟಾ, ವೋಕ್ಸ್ವೊಗನ್ ಪೋಲೊ, ಫೋಡರ್ ಸ್ಪೋಟರ್, ಹುಂಡಾಯ್ ಐ20, ಬ್ರಿಜಾದಂತ ಟಾಪ್ ಒನ್ ಕಂಪನಿಗಳ ಹತ್ತಾರು ಕಾರುಗಳು ಇವೆ.