ETV Bharat / state

ವಾಯುಸುತನ ಮೇಲೂ ಪ್ರವಾಹದ ಪರಿಣಾಮ; ನಿರೀಕ್ಷೆ ಹುಸಿಗೊಳಿಸಿದ ಹುಂಡಿಯ ಲೆಕ್ಕಾಚಾರ - ಅಂಜನಾದ್ರಿ ಬೆಟ್ಟ

ಐತಿಹಾಸಿಕ ಅಂಜನಾದ್ರಿ ಬೆಟ್ಟದ ಭಕ್ತರ ಕಾಣಿಕೆ ಹುಂಡಿಯನ್ನು ಶುಕ್ರವಾರ ತೆರೆಯಲಾಗಿದ್ದು ಒಟ್ಟು 8.26 ಲಕ್ಷ ರೂಪಾಯಿ ಮೊತ್ತದ ದೇಣಿಗೆ ಸಂಗ್ರಹವಾಗಿದೆ.

ಹುಂಡಿಯಲ್ಲಿನ ಹಣ ಎಣಿಕೆ
author img

By

Published : Sep 20, 2019, 7:43 PM IST

ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಭಕ್ತರ ಕಾಣಿಕೆ ಹುಂಡಿಯನ್ನು ತೆರೆಯಲಾಗಿದೆ. ಈ ವೇಳೆ ಹಣದ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 8.26 ಲಕ್ಷ ರೂಪಾಯಿ ಮೊತ್ತದ ದೇಣಿಗೆ ದೊರೆತಿದೆ.

ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅಂಜನಾದ್ರಿ ಬೆಟ್ಟದ ಕಾಣಿಕೆ ಹುಂಡಿ ತೆರೆಯಲಾಗಿದೆ.

ಹುಂಡಿಯಲ್ಲಿದ್ದ ಹಣ ಎಣಿಕೆ ಮಾಡಿದ ಕಂದಾಯ ಇಲಾಖೆಯ ಅಧಿಕಾರಿಗಳು 10 ಲಕ್ಷ ರೂಪಾಯಿ ಸಂಗ್ರಹದ ಆಸುಪಾಸು ಗುರಿ ಹೊಂದಿದ್ದರು. ಆದರೆ 8.26 ಲಕ್ಷ ರೂ ಮಾತ್ರ ಸಂಗ್ರಹವಾಗಿದೆ.

ಹಿಂದೂಗಳಿಗೆ ಶ್ರಾವಣ ಮಾಸ ಪವಿತ್ರವಾಗಿದ್ದು, ಹೆಚ್ಚಿನ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಹೆಚ್ಚಿನ ಮೊತ್ತದ ಹಣ ಸಂಗ್ರಹವಾಗಬಹುದು ಎಂದು ಕಂದಾಯ ಅಧಿಕಾರಿಗಳು ನಿರೀಕ್ಷಿಸಿದ್ದರು. ಆಂಜನೇಯನ ಆದಾಯದ ಮೇಲೆ ಇತ್ತೀಚೆಗೆ ನಡೆದ ಪ್ರವಾಹವೂ ಪರಿಣಾಮ ಬೀರಿದ್ದು, ಕಲೆಕ್ಷನ್ ಡಲ್ ಆಗಲಿಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐವತ್ತು ದಿನಗಳ ಹಿಂದೆ ಅಂದರೆ ಜುಲೈ 30ಕ್ಕೆ ಹುಂಡಿ ತೆರೆದಾಗ 6.31 ಲಕ್ಷ ರೂ ಹಣ ದೊರೆತಿತ್ತು.

Intro:ಶ್ರಾವಣ ಮಾಸ ಸೇರಿದಂತೆ ಒಂದು ಕಾಲು ತಿಂಗಳ ಬಳಿಕ ತಾಲ್ಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಭಕ್ತರ ಕಾಣಿಕೆ ಮೊತ್ತದ ಹುಂಡಿಯನ್ನು ಶುಕ್ರವಾರ ತೆಗೆಯಲಾಗಿದ್ದು ಒಟ್ಟು 8.26 ಲಕ್ಷ ರೂಪಾಯಿ ಮೊತ್ತದ ದೇಣಿಗೆ ಸಂಗ್ರವಾಗಿದೆ.
Body:ವಾಯುಸುತನಿಗೂ ಪ್ರವಾಹದ ಎಫೆಕ್ಟ್: ಕಲೆಕ್ಷನ್ ಡಲ್
ಗಂಗಾವತಿ:
ಶ್ರಾವಣ ಮಾಸ ಸೇರಿದಂತೆ ಒಂದು ಕಾಲು ತಿಂಗಳ ಬಳಿಕ ತಾಲ್ಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಭಕ್ತರ ಕಾಣಿಕೆ ಮೊತ್ತದ ಹುಂಡಿಯನ್ನು ಶುಕ್ರವಾರ ತೆಗೆಯಲಾಗಿದ್ದು ಒಟ್ಟು 8.26 ಲಕ್ಷ ರೂಪಾಯಿ ಮೊತ್ತದ ದೇಣಿಗೆ ಸಂಗ್ರವಾಗಿದೆ.
ಹಣ ಎಣಿಕೆ ಮಾಡಿದ ಕಂದಾಯ ಇಲಾಖೆಯ ಅಧಿಕಾರಿಗಳು ಹತ್ತು ಲಕ್ಷ ರೂಪಾಯಿ ಸಂಗ್ರಹದ ಆಸುಪಾಸು ಗುರಿ ಹೊಂದಿದ್ದರು. ಆದರೆ 8.26 ಲಕ್ಷ ಮಾತ್ರ ಸಂಗ್ರಹವಾಗಿದ್ದರಿಂದ ಅಧಿಕಾರಿಗಳು ಕಲೆಕ್ಷನ್ ಡಲ್ ಆಗಿದೆ ಎಂದಿದ್ದಾರೆ.
ಬಹುತೇಕ ಹಿಮದುಗಳಿಗೆ ಶ್ರಾವಣ ಮಾಸ ಪವಿತ್ರವಾಗಿದ್ದು, ಹೆಚ್ಚಿನ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಹೆಚ್ಚಿನ ಹಣ ಸಂಗ್ರವಾಗಬಹುದು ಎಂದು ಕಂದಾಯ ಅಧಿಕಾರಿಗಳು ನಿರೀಕ್ಷೆ ಮಾಡಿದ್ದರು. ಆದರೆ ನಿರೀಕ್ಷೆ ಸುಳ್ಳಾಗಿದೆ.
ಆಂಜನೇಯನ ಆದಾಯದ ಮೇಲೆ ಇತ್ತೀಚೆಗೆ ನಡೆದ ಪ್ರವಾಹವೂ ಎಫೆಕ್ಟ್ ಆಗಿದ್ದು, ಕಲೆಕ್ಷನ್ ಡಲ್ ಆಗಲಿಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐವತ್ತು ದಿನಗಳ ಹಿಂದೆ ಅಂದರೆ ಜುಲೈ 30ಕ್ಕೆ ಹುಂಡಿ ತೆಗೆದಾಗ 6.31 ಲಕ್ಷ ಹಣ ಸಂಗ್ರವಾಗಿತ್ತು.
ಈಗ 8.26 ಲಕ್ಷ ಸಂಗ್ರವಾಗಿದೆ. ಕೇವಲ ಮೂರು ತಿಂಗಳಲ್ಲಿ 14.57 ಲಕ್ಷ ಮೊತ್ತದ ಹಣ ಸಂಗ್ರವಾಗಿದೆ. ಹೀಗಾಗಿ ಆಂಜನಾದ್ರಿಯ ಆಂಜನೇಯನ ದೇಗುಲ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
Conclusion:ಕೇವಲ ಮೂರು ತಿಂಗಳಲ್ಲಿ 14.57 ಲಕ್ಷ ಮೊತ್ತದ ಹಣ ಸಂಗ್ರವಾಗಿದೆ. ಹೀಗಾಗಿ ಆಂಜನಾದ್ರಿಯ ಆಂಜನೇಯನ ದೇಗುಲ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.