ಗಂಗಾವತಿ(ಕೊಪ್ಪಳ) : ಅತೀ ಹೆಚ್ಚು ಭತ್ತ ಬೆಳೆಯುವ ಪ್ರದೇಶವಾದ ಕೊಪ್ಪಳದ ಗಂಗಾವತಿಯಲ್ಲಿ ರೈತರು ತಾವು ಬೆಳೆದ ಭತ್ತವನ್ನ ರಸ್ತೆಯಲ್ಲೇ ಒಣಗಿಸಿ ಅಲ್ಲಿಂದಲೇ ಮಾರುಕಟ್ಟೆಗೆ ರವಾನಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ತಮ್ಮ ಹೊಲಗಳಲ್ಲಿ ಸರಿಯಾದ ಕಣಗಳಿಲ್ಲದೆ ರಸ್ತೆ ಮೇಲೆ ಭತ್ತವನ್ನ ಸಂಸ್ಕರಿಸಿ ಅಲ್ಲಿಯೇ ಮೂಟೆ ಕಟ್ಟುತ್ತಾರೆ. ರಸ್ತೆಯ ಬದಿಯಲ್ಲಿ ಭತ್ತದ ರಾಶಿ ಬಿದ್ದಿರುವುದರಿಂದ ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡುತ್ತಿದೆ.
ಗಂಗಾವತಿ ನಗರದಿಂದ ಕೇಸರಹಟ್ಟಿವರೆಗಿನ ಸುಮಾರು 12ರಿಂದ 15ಕಿ.ಮೀ ಉದ್ದದ ರಾಜ್ಯ ಹೆದ್ದಾರಿಯಲ್ಲಿ ರೈತರು ಭತ್ತವನ್ನು ಒಣಗಿಸುತ್ತಾರೆ. ಅಲ್ಲಿಯೇ ತೂಕ ಮಾಡಿ ವಾಹನಗಳ ಮೂಲಕ ಮಾರುಕಟ್ಟೆಗೆ ಸಾಗಿಸುತ್ತಾರೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಸೇರಿದಂತೆ ವಾಹನ ಸವಾರರಿಗೂ ಸಮಸ್ಯೆಯಾಗುತ್ತಿದೆ.
ಇದನ್ನೂ ಓದಿ: ಆರೋಗ್ಯ ಕಾಪಾಡಬೇಕಾದ ಸರ್ಕಾರಿ ಆಸ್ಪತ್ರೆಗೇ ದೊಡ್ಡರೋಗ..