ETV Bharat / state

ಲಾಂಗ್ ಪೆಂಡಿಂಗ್ ಕೇಸ್​​ಗಳ ರೀಓಪನ್, ಆರೋಪಿಗಳ ಪತ್ತೆಗೆ ಬಲೆ ಬೀಸಿದ ಕೊಪ್ಪಳ ಎಸ್​​ಪಿ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ

ಒಂದು ತಿಂಗಳಲ್ಲಿ ಈಗಾಗಲೇ 36 ಆರೋಪಿಗಳನ್ನು ಬಂಧಿಸಿ ಎಳೆ ತಂದಿದ್ದಾರೆ. ಪ್ರಕರಣಗಳಲ್ಲಿ ಆರೋಪಿಗಳಾಗಿ ತಲೆಮರೆಸಿಕೊಂಡಿರುವ ಕೆಲವರು ಸಾವನ್ನಪ್ಪಿದ್ದಾರೆ. ಆ ಕುರಿತಂತೆ ಮರಣ ಪ್ರಮಾಣ ಪತ್ರವನ್ನು ಪೊಲೀಸರಿಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನು, 2000ನೇ ಇಸವಿಯಿಂದ 2021ರ ಜನವರಿವರೆಗೆ ನಡೆದ ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ ಪೊಲೀಸರು ಸಿ ರಿಪೋರ್ಟ್ ಹಾಕಿದ್ದಾರೆ..

district-police-superintendent-t-sridhara-talk-news
ಕೊಪ್ಪಳ ಎಸ್​​ಪಿ
author img

By

Published : Apr 20, 2021, 11:01 PM IST

ಕೊಪ್ಪಳ : ಜಿಲ್ಲೆಯಲ್ಲಿ ಹತ್ತಾರು ವರ್ಷಗಳ ಹಿಂದೆ ನಡೆದ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಕೊಪ್ಪಳ ಜಿಲ್ಲಾ ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದಾರೆ.

ಕೊಪ್ಪಳ ಎಸ್​​ಪಿ

ಓದಿ: ರಾಜ್ಯದಲ್ಲಿಂದು ಬರೋಬ್ಬರಿ 21,794 ಜನರಿಗೆ‌ ಕೊರೊನಾ ದೃಢ : 149 ಮಂದಿ ಬಲಿ

ಹತ್ತಾರು ವರ್ಷದಿಂದ ಬಾಕಿ ಇರುವ ಪ್ರಕರಣಗಳ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠ ಟಿ. ಶ್ರೀಧರ ಅವರು ರಚಿಸಿರುವ ವಿಶೇಷ ತಂಡವು ಅನೇಕ ಪ್ರಕರಣಗಳ ಆರೋಪಿಗಳನ್ನು ಈಗಾಗಲೇ ಬಲೆಗೆ ಬೀಳಿಸಿದೆ.

ಕೊಪ್ಪಳ ಜಿಲ್ಲೆಯಲ್ಲಿ ಹತ್ತಾರು ವರ್ಷಗಳ ಹಿಂದೆ ನಡೆದ ದರೋಡೆ, ಘೋರ ಅಪಘಾತ ಪ್ರಕರಣಗಳು, ಸ್ವತ್ತಿನ ಪ್ರಕರಣ, ಕಳ್ಳತನ, ಡಕಾಯಿತಿ ಸೇರಿ ಅನೇಕ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇಂತಹ 179 ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಪ್ರಕರಣಗಳಲ್ಲಿ ಭಾಗಿಯಾದ ಈ 179 ಆರೋಪಿಗಳು ಅಂದು ನ್ಯಾಯಾಲಯದಲ್ಲಿ ಜಾಮೀನು ಪಡೆದು ತಲೆ ಮರೆಸಿಕೊಂಡಿದ್ದಾರೆ.

ಇಂತಹ ಹಳೆಯ ಪ್ರಕರಣ (LONG PENDING CASES)ಗಳು ರೀಓಪನ್ ಮಾಡಲಾಗಿದೆ. ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಶಾಕ್ ನೀಡಿದೆ. ಈ ಲಾಂಗ್ ಪೆಂಡಿಂಗ್ ಕೇಸ್‌ಗಳ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಅವರು ವಿಶೇಷ ತಂಡ ರಚಿಸಿದೆ. ಈ ತಂಡ ಆರೋಪಿಗಳನ್ನು ಬಲೆಗೆ ಬೀಳಿಸಿ ಹೆಡೆಮುರಿ ಕಟ್ಟಿ ನ್ಯಾಯಾಂಗ ಬಂಧನಕ್ಕೊಪ್ಪಿಸುತ್ತಿದೆ.

ಒಂದು ತಿಂಗಳಲ್ಲಿ ಈಗಾಗಲೇ 36 ಆರೋಪಿಗಳನ್ನು ಬಂಧಿಸಿ ಎಳೆ ತಂದಿದ್ದಾರೆ. ಪ್ರಕರಣಗಳಲ್ಲಿ ಆರೋಪಿಗಳಾಗಿ ತಲೆಮರೆಸಿಕೊಂಡಿರುವ ಕೆಲವರು ಸಾವನ್ನಪ್ಪಿದ್ದಾರೆ. ಆ ಕುರಿತಂತೆ ಮರಣ ಪ್ರಮಾಣ ಪತ್ರವನ್ನು ಪೊಲೀಸರಿಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನು, 2000ನೇ ಇಸವಿಯಿಂದ 2021ರ ಜನವರಿವರೆಗೆ ನಡೆದ ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ ಪೊಲೀಸರು ಸಿ ರಿಪೋರ್ಟ್ ಹಾಕಿದ್ದಾರೆ.

ಅಂತಹ ಪ್ರಕರಣಗಳಲ್ಲಿ ಈಗಾಗಲೇ 9 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಟಿ. ಶ್ರೀಧರ್ ಅವರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಲಾಂಗ್ ಪೆಂಡಿಂಗ್ ಕೇಸ್‌ಗಳಲ್ಲಿ ತಲೆ‌ಮರೆಸಿಕೊಂಡ ಆರೋಪಿಗಳಿಗೆ ಕೊಪ್ಪಳ ಜಿಲ್ಲಾ ಪೊಲೀಸರ ಈ ಆಪರೇಷನ್ ನಡುಕ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.