ಕೊಪ್ಪಳ: ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಅಲ್ಲಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹರಿಯುತ್ತಿರುವ ಹಳ್ಳದಲ್ಲಿ ವ್ಯಕ್ತಿಯ ಶವವೊಂದು ತೇಲಿ ಬಂದಿದೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದ ಹಳ್ಳದಲ್ಲಿ ಶವ ತೇಲಿ ಬಂದಿದೆ. ಹಳ್ಳದಲ್ಲಿ ತೇಲಿ ಬರುತ್ತಿದ್ದ ಶವ ನೋಡಿದ ಸ್ಥಳೀಯರು ಜೆಸಿಬಿ ಮೂಲಕ ಹೊರ ತೆಗೆದಿದ್ದಾರೆ.
ಹನುಮಪ್ಪ ಹೊಳೆಯಪ್ಪ ನಂದ್ಯಾಲ (65) ಎಂಬಾತನ ಶವ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಕುಷ್ಟಗಿ ತಾಲೂಕಿನ ತೆಗ್ಗಿಹಾಳ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ದನ ಮೇಯಿಸಲು ಹೋಗಿದ್ದಾಗ ಮಳೆಯ ನೀರಿನ ರಭಸಕ್ಕೆ ಹನುಮಪ್ಪ ಕೊಚ್ಚಿ ಹೋಗಿದ್ದ ಎನ್ನಲಾಗಿದೆ. ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.