ETV Bharat / state

ಸೀರೆ ಮಾರಾಟಗಾರನಿಗೆ ಸೋಂಕು: ಪ್ರಾಥಮಿಕ ಸಂಪರ್ಕಿತರ ಹುಡುಕುವುದೇ ಸವಾಲು

ಲಾಕ್​ಡೌನ್​ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ ಯುವಕ ಒಂದು ವಾರದ ಹಿಂದೆ ನಗರಕ್ಕೆ ಆಗಮಿಸಿದ್ದ. ಈತನೊಂದಿಗೆ ತಂದೆ ಮಾತ್ರ ವಾಸಿಸುತ್ತಿದ್ದರು. ಆದರೆ ಈ ಯುವಕ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು, ಕಳೆದೊಂದು ವಾರದಿಂದ ಎಲ್ಲೆಲ್ಲಿ ಓಡಾಡಿದ್ದಾನೆ ಎಂಬುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

corona-infection
ಸೀರೆ ಮಾರಾಟಗಾರನಿಗೆ ಸೋಂಕು
author img

By

Published : Jun 9, 2020, 1:08 PM IST

ಗಂಗಾವತಿ : ಗಾಂಧಿ ನಗರದ ಹದಿನೆಂಟು ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಈತನ ಪ್ರಾಥಮಿಕ ಸಂಪರ್ಕ ಹೊಂದಿದವರ ಮಾಹಿತಿ ಕಲೆ ಹಾಕುವುದು ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ಲಾಕ್​ಡೌನ್​ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ ಯುವಕ ವಾರದ ಹಿಂದೆ ನಗರಕ್ಕೆ ಆಗಮಿಸಿದ್ದ. ಈತನೊಂದಿಗೆ ಇವನ ತಂದೆ ಮಾತ್ರ ವಾಸಿಸುತ್ತಿದ್ದರು. ಆದರೆ ಈ ಯುವಕ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು, ಕಳೆದ ಒಂದು ವಾರದಿಂದ ಎಲ್ಲೆಲ್ಲಿ ಓಡಾಡಿದ್ದಾನೆ, ಯಾವ ಮನೆಗಳಿಗೆ ತೆರಳಿ ಬಟ್ಟೆ ಮಾರಿದ್ದಾನೆ ಎಂಬ ಮಾಹಿತಿ ಕಲೆ ಹಾಕುವುದು ಇಲಾಖೆಯ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಈತನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸಂಖ್ಯೆಯೇ ದೊಡ್ಡ ಪ್ರಮಾಣದಲ್ಲಿ ಇರಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಉಂಟಾಗಿದೆ.

ಯುವಕ ವಾಸಿಸುತ್ತಿದ್ದ ಮನೆಯ ಸುತ್ತ ಇದೀಗ ಸೀಲ್​ಡೌನ್ ಮಾಡಲಾಗಿದೆ. ಪೌರಾಯುಕ್ತ ಕೆ. ಸಿ. ಗಂಗಾಧರ ಅವರ ನೇತೃತ್ವದಲ್ಲಿ ನಗರಸಭೆಯ ಅಧಿಕಾರಿಗಳು ಸುತ್ತಲಿನ ಜನರಿಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.