ETV Bharat / state

ಇಕ್ಬಾಲ್ ಅನ್ಸಾರಿ ಹುಟ್ಟುಹಬ್ಬ: ದೇಗುಲಕ್ಕೆ ಸ್ಕ್ರೀನಿಂಗ್​ ಮಷಿನ್​ ಕೊಡುಗೆ ನೀಡಿದ ಬೆಂಬಲಿಗರು - Screening Machine contribute to temple

ಕೊರೊನಾ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿರುವುದನ್ನು ಮನಗಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ತಮ್ಮ ನಾಯಕನ ಹುಟ್ಟುಹಬ್ಬವನ್ನು ದೇಗುಲಕ್ಕೆ ಸ್ಕ್ರೀನಿಂಗ್​ ಮಷಿನ್​ ನೀಡುವ ಮೂಲಕ ಆಚರಿಸಿದ್ದಾರೆ.

Ikbal ansari birthday
ದೇಗುಲಕ್ಕೆ ಸ್ಕ್ರೀನಿಂಗ್​ ಮಷಿನ್​ ಕೊಡುಗೆ ನೀಡಿದ ಬೆಂಬಲಿಗರು
author img

By

Published : Jun 17, 2020, 12:16 PM IST

ಗಂಗಾವತಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು, ತಮ್ಮ ನಾಯಕನ 58ನೇ ಹುಟ್ಟುಹಬ್ಬದ ಅಂಗವಾಗಿ ಅದ್ಧೂರಿತನ ಕೈಬಿಟ್ಟು ವಿಭಿನ್ನವಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.

ದೇಗುಲಕ್ಕೆ ಸ್ಕ್ರೀನಿಂಗ್​ ಮಷಿನ್​ ಕೊಡುಗೆ ನೀಡಿದ ಅನ್ಸಾರಿ ಬೆಂಬಲಿಗರು

ನಗರದ ಎಲ್ಲಾ ಕೋಮಿನ ಪ್ರಾರ್ಥನಾ ಮಂದಿರಕ್ಕೆ ತೆರಳಿದ ಬೆಂಬಲಿಗರು, ದೇಗುಲಕ್ಕೆ ಬರುವ ಭಕ್ತರ ದೇಹದ ಉಷ್ಣಾಂಶ ಪತ್ತೆಹಚ್ಚುವ ಸ್ಕ್ರೀನಿಂಗ್ ಮಷಿನ್ಅ​ನ್ನು ಅಲ್ಲಿನ ಅರ್ಚಕರಿಗೆ ಹಸ್ತಾಂತರಿಸಿದರು. ನಂತರ ಮುಖಂಡರು ಮಂದಿರಕ್ಕೆ ಬರುವ ಭಕ್ತರನ್ನು ತಪಾಸಣೆ ಮಾಡಲು ಯಂತ್ರವನ್ನು ಬಳಸುವಂತೆ ಮನವಿ ಮಾಡಿದರು.

ಕೊರೊನಾ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಜನಸೇವಕರಾದ ತಮ್ಮ ನಾಯಕನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದು ಬೇಡ ಎಂಬ ಉದ್ದೇಶಕ್ಕೆ ಈ ಕೆಲಸಕ್ಕೆ ಮುಂದಾಗಿದ್ದೇವೆ. ಇದು ಇತರರಿಗೆ ಮಾದರಿ ಎಂದು ಮುಖಂಡರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.