ETV Bharat / state

ಕಾಂಗ್ರೆಸ್ ಎಕ್ಸ್ಫೈರ್​ ಆಗಿದೆ, ಜನರಿಗೆ ಗ್ಯಾರಂಟಿ ಎಲ್ಲಿಂದ ಕೊಡ್ತಾರೆ: ಸ್ಮೃತಿ ಇರಾನಿ ಟೀಕೆ

author img

By

Published : Apr 29, 2023, 8:56 PM IST

ಯುಪಿಎ ಅಧಿಕಾರದಲ್ಲಿದ್ದ ವೇಳೆ ಕರ್ನಾಟಕಕ್ಕೆ ಅನುದಾನ ನೀಡಲು ಮೀನಮೇಷ ಎಣಿಸಿತು. ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2.56 ಲಕ್ಷ ಕೋಟಿ ರಾಜ್ಯಕ್ಕೆ ಅನುದಾನ ಒದಗಿಸಿದೆ. ಕಾಂಗ್ರೆಸ್​ಗಿಂತ ಎರಡು ಪಟ್ಟುಹೆಚ್ಚು ಅನುದಾನ ನೀಡಿದ್ದೇವೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ

Union Minister Smriti Irani spoke at Koppal.
ಕೊಪ್ಪಳದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದರು.

ಕೊಪ್ಪಳ: ದೇಶದಲ್ಲಿಯೇ ಕಾಂಗ್ರೆಸ್ ಎಕ್ಸ್ಫೈರ್ ಆಗಿದೆ. ಇನ್ನು ಕರ್ನಾಟಕದ ಜನರಿಗೆ ಗ್ಯಾರೆಂಟಿ ಎಲ್ಲಿಂದ ಕೊಡ್ತಾರೆ. ಎಕ್ಸ್ಫೈರ್ ಕಾಂಗ್ರೆಸ್ ಕೈ ಬಿಡಿ, ಬಿಜೆಪಿಗೆ ಮತ ನೀಡಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮನವಿ ಮಾಡಿದರು.

ಕೊಪ್ಪಳದ ಭಾಗ್ಯನಗರದಲ್ಲಿಂದು ಹಮ್ಮಿಕೊಂಡಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಜನರಿಗೆ ನರೇಂದ್ರ ಮೋದಿ ಸಿಕ್ಕಿರುವುದು ನಮ್ಮ ಅದೃಷ್ಟ. ಸದ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಏನು ಮಾಡುತ್ತೇವೆ ಎನ್ನುತ್ತಿದ್ದಾರೆ, ಅದೆಲ್ಲವನ್ನು ಬಿಜೆಪಿ ಸರ್ಕಾರ ಜನರಿಗೆ ನೀಡಿದೆ. ಪಂಪ್​ಸೆಟ್​ಗೆ ವಿದ್ಯುತ್, ಡಿಸೇಲ್ ಸಬ್ಸಿಡಿ ನೀಡಿದೆ. ಇದೆಲ್ಲವನ್ನೂ ಕಾಂಗ್ರೆಸ್ ತನ್ನ ಯೋಜನೆಗಳಲ್ಲಿ ಕಾಪಿ ಮಾಡುತ್ತಿದೆ. ಅದನ್ನು ಸರಿಯಾಗಿ ಮಾಡದೆ ನಗೆಪಾಟಲಿಗೆ ಈಡಾಗುತ್ತಿದೆ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡುವುದಾಗಿ ಹೇಳುತ್ತಾರೆ. ಆದರೆ ನಮ್ಮ ಸರ್ಕಾರ ಈಗಾಗಲೇ ಸಾವಿರಾರು ಕೋಟಿ ರೂ. ನೀಡಿದೆ. ಕೈ ನೇತಾರ ಕನ್ಫ್ಯೂಸ್ಡ್​ ಗಿರಾಕಿ. ಕಾಂಗ್ರೆಸ್​​ದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅವರಿಗೆ ತಮ್ಮ ಗ್ಯಾರಂಟಿ ಬಗ್ಗೆ ಗೊತ್ತಿಲ್ಲ. ಜೀನ್ಸ್ ಪಾರ್ಕ್, ಎರಡು ಸಾವಿರ ರೂ. ಭತ್ಯೆ ಅಂತಾರೆ. ಆದರೆ ಹಿಂದಿನಿಂದ ಅವರ ಕಾರ್ಯಕರ್ತರು ಐದು ಸಾವಿರ ಅಂತಾರೆ. ಆದರೆ, ಬಿಜೆಪಿ ಹಾಗಲ್ಲ ನಾವು ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿದ್ದೇವೆ ಎಂದು ಹೇಳಿದರು.

ಮತದಾರರು ಡಿಕೆಶಿ ಸಿದ್ದರಾಮಯ್ಯನ ಮನೆಗೆ ಕಳಿಸ್ತಾರೆ: 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನ ಸಿದ್ದರಾಮಯ್ಯ, ಡಿಕೆಶಿ ಅವರನ್ನು ರಾಜ್ಯದ ಜನ ಮನೆಗೆ ಕಳಿಸುತ್ತಾರೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಕರ್ನಾಟಕಕ್ಕೆ ಎಷ್ಟು ಅನುದಾನ ನೀಡಿದೆ ? ಕಾಂಗ್ರೆಸ್​ನವರು ಹೇಳಲಿ. ಮೋದಿ ಅವರು ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಅದು 2.56 ಲಕ್ಷ ಕೋಟಿ ನೀಡಿದ್ದೇವೆ. ಕಾಂಗ್ರೆಸ್ ಗಿಂತ ಎರಡು ಪಟ್ಟುಹೆಚ್ಚು ಅನುದಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಹಿನ್ನೆಡೆಗೆ ಕಾಂಗ್ರೆಸ್ ಕಾರಣ. ಕಳಸಾ ಬಂಡೂರಿ ಯೋಜನೆಯನ್ನು ಕಾಂಗ್ರೆಸ್ ಮುಟ್ಟಲಿಲ್ಲ. ನಾವು ಕಾರ್ಯಾರಂಭ ಮಾಡಿದ್ದೇವೆ.5300 ಕೋಟಿ ರೂ. ಅನುದಾನ ನೀಡಿದ್ದೇವೆ. ಕಾಪಿಕ್ಯಾಟ್, ಕೋಲ್ಡ್ ಸ್ಟೋರೇಜ್, ಎಕ್ಸಪೈರ್ ಕಾಂಗ್ರೆಸ್ ರಿವರ್ಸ ಗೇರ್ ಕಾಂಗ್ರೆಸ್ ಕೈ ಬಿಡಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದರು.

ಮತದಾರರ ಆಶೀರ್ವಾದ ಅಗತ್ಯ : ಬಿಜೆಪಿ ಅಭ್ಯರ್ಥಿ ಈ ಚುನಾವಣೆಯಲ್ಲಿ ವಿಜಯದ ಮಾಲೆ ಹಾಕಿಕೊಳ್ಳಲು ನಿಮ್ಮ ಆಶೀರ್ವಾದ ಬೇಕು. ಇಲ್ಲಿ ಎಲ್ಲರೂ ಸಮನಾಗಿ ಒಂದೆಡೆ ಸೇರಿದ್ದೇವೆ. ಮೇ 10ರಂದು ಬಿಜೆಪಿ ಗೆಲ್ಲಿಸಿ ಸರ್ಕಾರ ರಚಿಸಬೇಕು. ಆದಿವಾಸಿಗಳು, ಅರ್ಹರಿಗೆ ಸಿಗಬೇಕಾದ ಮೀಸಲಾತಿಯನ್ನು ಸಂವಿಧಾನ ವಿರೋಧವಾಗಿ ಮುಸ್ಲಿಂರಿಗೆ ನೀಡಿತ್ತು. ಅದನ್ನು ನಮ್ಮ ಸರ್ಕಾರ ವಾಪಸ್ ಪಡೆದಿದೆ ಎಂದು ರಾಜ್ಯ ಸರ್ಕಾರವನ್ನು ಸಚಿವೆ ಇರಾನಿ ಶ್ಲಾಘಿಸಿದರು.

ಅಮೇಥಿಯಲ್ಲಿ ಮೋದಿ ಬರುವವರೆಗೆ ಯಾವುದೇ ಅಭಿವೃದ್ಧಿ ಆಗಿರಲಿಲ್ಲ. ಮೋದಿ ಬಂದ ಮೇಲೆ ಎರಡು ಲಕ್ಷ ಜನರಿಗೆ ಮನೆ ನೀಡಲಾಗಿದೆ. ಹನುಮನು ಜನಿಸಿದ ನಾಡು ಅಂಜನಾದ್ರಿಯ ಈ ನೆಲದಲ್ಲಿ ಕಾಂಗ್ರೆಸ್ ಗೆ ಒಂದು ಮತ ಕೂಡ ಬೀಳಬಾರದು. ದೇಶದ ಹಿತ ದೃಷ್ಟಿಯಿಂದ ನೀವೆಲ್ಲ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ವಾಗ್ದಾನ ಮಾಡಿದರು.

ಇದನ್ನೂಓದಿ:ಜನಾರ್ದನರೆಡ್ಡಿ ಮತ್ತು ಅವರ ಸ್ನೇಹಕ್ಕಿಂತ ನನಗೆ ಪಕ್ಷ ದೊಡ್ಡದು: ಸಚಿವ ಶ್ರೀರಾಮುಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.