ETV Bharat / state

ಸೋಂಕು ಹರಡುವವರ ವಿರುದ್ಧ ಸಮಾಜ ವಿರೋಧಿ ಕಾಯ್ದೆಯಡಿ ದೂರು.. ಕೊಪ್ಪಳ ಡಿಸಿ

ಕೊರೊನಾ ಸೋಂಕು ಹೆಚ್ಚಳಕ್ಕೆ ಮುಖ್ಯ ಕಾರಣ ಜನರಲ್ಲಿ ಜಾಗೃತಿಯ ಕೊರತೆ. ಮಾಸ್ಕ್ ಇಲ್ಲದೇ ಓಡಾಡುವುದು ಹಾಗೂ ಕಾಲಕಾಲಕ್ಕೆ ಕೈಗಳನ್ನು ಶುಚಿಮಾಡಿಕೊಳ್ಳದಿರುವುದು. ಇವೇ ಸಣ್ಣ ವಿಷಯಗಳು ಕೊರೊನಾಗೆ ಕಾರಣವಾಗುತ್ತಿವೆ..

author img

By

Published : Sep 6, 2020, 8:59 PM IST

Complaints under the Anti-Social Act against the spread of infection: Koppal DC
ಸೋಂಕು ಹರಡುವವರ ವಿರುದ್ಧ ಸಮಾಜ ವಿರೋಧಿ ಕಾಯ್ದೆಯಡಿ ದೂರು : ಕೊಪ್ಪಳ ಡಿಸಿ

ಗಂಗಾವತಿ : ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಾಗ್ಯೂ ಕೊಪ್ಪಳದ ಭಾಗ್ಯನಗರ ಮತ್ತು ಗಂಗಾವತಿ ಕೊರೊನಾ ಹಾಟ್‌ಸ್ಪಾಟ್ ಕೇಂದ್ರಗಳಾಗಿವೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಕಳವಳ ವ್ಯಕ್ತಪಡಿಸಿದರು.

ಸೋಂಕು ಹರಡುವವರ ವಿರುದ್ಧ ಸಮಾಜ ವಿರೋಧಿ ಕಾಯ್ದೆಯಡಿ ದೂರು

ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಾಗಲೂ ಕೊರೊನಾ ಸೋಂಕು ಹೆಚ್ಚಳವಾಗಲು ಮುಖ್ಯ ಕಾರಣ ಜನರಲ್ಲಿ ಜಾಗೃತಿಯ ಕೊರತೆ, ಮಾಸ್ಕ್ ಇಲ್ಲದೇ ಓಡಾಡುವುದು ಹಾಗೂ ಕಾಲಕಾಲಕ್ಕೆ ಕೈಗಳನ್ನು ಶುಚಿಮಾಡಿಕೊಳ್ಳದಿರುವುದು. ಇವೇ ಸಣ್ಣ ವಿಷಯಗಳು ಕೊರೊನಾಗೆ ಕಾರಣವಾಗುತ್ತಿವೆ ಎಂದರು.

ಈ ಹಿನ್ನೆಲೆ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಡುವವರನ್ನು ಸೋಂಕು ಹರಡುವವರು ಎಂದು ಪರಿಗಣಿಸಿ ಅಂತವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಮಾಜ ವಿರೋಧಿ ಕಾಯ್ದೆಯಡಿ ದೂರು ದಾಖಲಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.