ETV Bharat / state

ಕುಷ್ಟಗಿಯಲ್ಲಿ ಕಾರು ಪಲ್ಲಿ: ಏಳು ಜನರಿಗೆ ಗಂಭೀರ ಗಾಯ - Kushtagi Latest Crime News

ಕಾರು ಪಲ್ಟಿಯಾಗಿ 7 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ - 50ರಲ್ಲಿ ನಡೆದಿದೆ. ಗಾಯಾಳುಗಳು ಬೆಂಗಳೂರಿನಿಂದ ರಾಜಸ್ಥಾನಕ್ಕೆ ಖಾಸಗಿ ವಾಹನದಲ್ಲಿ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

Seven people seriously injured In   Kushtagi
ಕುಷ್ಟಗಿಯಲ್ಲಿ ಕಾರು ಪಲ್ಲಿ: ಏಳು ಜನರಿಗೆ ಗಂಭೀರ ಗಾಯ
author img

By

Published : May 19, 2020, 10:57 PM IST

ಕುಷ್ಟಗಿ: ನಾಯಿ ರಕ್ಷಿಸಲು ಹೋಗಿ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ 7 ಜನರಿಗೆ ಗಂಭೀರ ಗಾಯಗಳಾದ ಘಟನೆ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಇಂದು ಸಂಜೆ ನಡೆದಿದೆ.

ರಾಜಸ್ಥಾನ ಮೂಲದ ಇವರು ಬೆಂಗಳೂರಿನಿಂದ ರಾಜಸ್ಥಾನಕ್ಕೆ ಖಾಸಗಿ ವಾಹನದಲ್ಲಿ ಕುಷ್ಟಗಿ ಮೂಲಕ ಹೊರಟಿದ್ದರು. ಅತಿ ವೇಗದಲ್ಲಿದ್ದ, ಈ ಕಾರಿಗೆ ಬುಡಕುಂಟಿ ಕ್ರಾಸ್ ಬಳಿ ನಾಯಿ ಅಡ್ಡ ಬಂದಿದೆ. ಚಾಲಕ ನಾಯಿ ಜೀವ ಉಳಿಸಲು ಯತ್ನಿಸಿದ ವೇಳೆ ಕಾರು ಡಿವೈಡರ್ ಮೇಲೆ ಪಲ್ಲಿಯಾಗಿದೆ. ಕಾರಿನಲ್ಲಿದ್ದ ಓರ್ವ ಮಹಿಳೆ, ಇಬ್ಬರು ಮಕ್ಕಳು, ನಾಲ್ವರು ಸೇರಿದಂತೆ ಒಟ್ಟು 7ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುಗಳಿಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಕೊಪ್ಪಳ ಕೆಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಬೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.