ETV Bharat / state

ಬಿ.ಸಿ ಪಾಟೀಲ್ ಜೊತೆ ಮುಂದುವರೆದ ಜಿಲ್ಲೆಯ ಬಿಜೆಪಿ ಶಾಸಕರ ಮುನಿಸು? - BJP MLA's Absent to KDP Meeting

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಜಿಲ್ಲೆಯ ಮೂವರು ಬಿಜೆಪಿ ಶಾಸಕರ ಮಧ್ಯೆ ಮುನಿಸು ಉಂಟಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ.

B C Pateel
ಸಚಿವ ಬಿ ಸಿ ಪಾಟೀಲ್
author img

By

Published : Jul 14, 2021, 6:47 PM IST

ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವ ಬಿ. ಪಾಟೀಲ್ ಅವರು ಇಂದು ನಡೆಸಿದ ಕೆಡಿಪಿ ಸಭೆಯನ್ನು ಜಿಲ್ಲೆಯ ಬಿಜೆಪಿ ಶಾಸಕರು ಬಹಿಷ್ಕರಿಸಿದರಾ? ಎಂಬ ಅನುಮಾನ ವ್ಯಕ್ತವಾಗಿದೆ. ಜಿಲ್ಲೆಯ ಮೂವರು ಬಿಜೆಪಿ ಶಾಸಕರು ಸಭೆಗೆ ಗೈರು ಹಾಜರಾಗಿದ್ದರಿಂದ ಈ ಅನುಮಾನ ಮೂಡಿದೆ.

ಕೊಪ್ಪಳದಲ್ಲಿ ನಡೆದ ಕೆಡಿಪಿ ಸಭೆ

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಜಿಲ್ಲೆಯ ಮೂವರು ಬಿಜೆಪಿ ಶಾಸಕರ ಮಧ್ಯೆ ಮುನಿಸು ಉಂಟಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿರುವ ನಡುವೆಯೇ ಕೆಡಿಪಿ ಸಭೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಹಾಗೂ ಯಲಬುರ್ಗಾ ಹಾಲಪ್ಪ ಆಚಾರ್ ಗೈರು ಹಾಜರಾಗಿದ್ದರು.

ಈ ಮೂಲಕ ಸಚಿವ ಬಿ.ಸಿ. ಪಾಟೀಲ್ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಭೆಯಲ್ಲಿ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಸಂಸದ ಸಂಗಣ್ಣ ಕರಡಿ ಮಾತ್ರ ಭಾಗಿಯಾಗಿದ್ದರು.

ಇದನ್ನೂ ಓದಿ: ಕೆಆರ್​ಎಸ್​ ಡ್ಯಾಂ ಬಿರುಕು ಹೇಳಿಕೆ: ಸುಮಲತಾ ವಿರುದ್ಧ ಸಚಿವ ಅಶೋಕ್​ ಸಿಡಿಮಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.