ಕೊಪ್ಪಳ: ರಸ್ತೆ ದಾಟುತ್ತಿದ್ದಾಗ ವಾಹನದಡಿ ಸಿಲುಕಿ ಕರಡಿಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸೂರು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪಥ ರಸ್ತೆಯಲ್ಲಿ ನಡೆದಿದೆ.
ಹೊಸಪೇಟೆ ಕಡೆಯಿಂದ ವಿಜಯಪುರಕ್ಕೆ ಹೋಗುವ ರಸ್ತೆಯಲ್ಲಿ ಬೆಳಗ್ಗೆ ಕರಡಿ ರಸ್ತೆ ದಾಟುತ್ತಿರುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕರಡಿ ಸ್ಥಳದಲ್ಲಿಯೇ ಅಸುನೀಗಿದೆ.