ETV Bharat / state

ನಮ್ಮವರಿಗೆ ಪರಿಷತ್ ಟಿಕೆಟ್ ನೀಡುವಂತೆ ನಾನೂ ಸಹ ಒತ್ತಾಯ ಮಾಡುವೆ: ಬಿ.ಸಿ.ಪಾಟೀಲ್ - MLC ticket issue

ಪರಿಷತ್ ಚುನಾವಣೆಗೆ ಟಿಕೆಟ್ ನೀಡುವ ಕುರಿತು ಕುಷ್ಟಗಿಯಲ್ಲಿ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೆಲವು ಶಾಸಕರ ತ್ಯಾಗದಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ತ್ಯಾಗಕ್ಕೆ ಮೋಸವಿಲ್ಲ ಎಂದಿದ್ದಾರೆ.

BC Patil reaction about MLC ticket
ಕೃಷಿ ಸಚಿವ ಬಿ.ಸಿ. ಪಾಟೀಲ್
author img

By

Published : Jun 16, 2020, 5:55 PM IST

ಕೊಪ್ಪಳ: ಹೆಚ್​.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಅವರಿಗೆ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವಂತೆ ನಾನೂ ಸಹ ಒತ್ತಾಯ ಮಾಡುತ್ತೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಕುಷ್ಟಗಿ ಪಟ್ಟಣದ ಹೊರವಲಯದಲ್ಲಿರುವ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, 17 ಜನರು ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸಿಎಂ ಯಡಿಯೂರಪ್ಪನವರು ನೀಡಿದ ಮಾತಿನಂತೆ ನಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ.

ಎಂಟಿಬಿ ನಾಗರಾಜ್, ಹೆಚ್​.ವಿಶ್ವನಾಥ್​ ಹಾಗೂ ಆರ್.ಶಂಕರ್ ಅವರಿಗೆ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ನಾನೂ ಸಹ ಒತ್ತಾಯಿಸುತ್ತೇನೆ. ಈ ಬಗ್ಗೆ ಈಗಾಗಲೇ‌ ಪಕ್ಷದ‌‌ ಕೋರ್​ ಕಮೀಟಿಯಲ್ಲಿ ಚರ್ಚೆಯಾಗಿದೆ. ಪಕ್ಷದ ಹೈಕಮಾಂಡ್ ಸಹ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿದೆ. ಬಿಜೆಪಿ ನಂಬಿಕೆಗೆ ದ್ರೋಹ ಬಗೆಯುವ ಪಕ್ಷವಲ್ಲ. ಬಿಎಸ್​ವೈ ಸಹ ನಂಬಿದವರಿಗೆ ದ್ರೋಹ ಮಾಡುವ ವ್ಯಕ್ತಿಯಲ್ಲ. ಈ ಮೂವರಿಗೂ ಅವರು ನ್ಯಾಯ ಒದಗಿಸಲಿದ್ದಾರೆ. ಈ ವಿಷಯಕ್ಕೆ ನಾವೂ ಸಹ ಅವರಿಗೆ ಬೆಂಬಲವಾಗಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.