ಕೊಪ್ಪಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಪ್ರಕರಣ ಮುಗಿದು ಹೋದ ಅಧ್ಯಾಯ. ಈಗ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಆದರೆ, ಕಾನೂನಿನಡಿಯಲ್ಲಿ ಎಲ್ಲರೂ ಒಂದೇ ಎಂದು ವಿಜಯಪುರ ನಗರ ಶಾಸಕ ಹಾಗೂ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಜಿಲ್ಲೆಯ ಕನಕಗಿರಿಯಲ್ಲಿ ಮಾತನಾಡಿರುವ ಅವರು, ಯಾರೇ ಆಗಲಿ ಭ್ರಷ್ಟಾಚಾರ, ಲೂಟಿ ಮಾಡಿದವರಿಗೆ ಶಿಕ್ಷೆಯಾಗಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷದಲ್ಲಿ ಭ್ರಷ್ಟರಿದ್ದರೂ ಅಂತಹ ರಾಜಕಾರಣಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ರು.
ಭ್ರಷ್ಟಾಚಾರ ಆರೋಪದ ಪರವಾಗಿ ಹೇಳಿಕೆ ಕೊಡುವುದು ಧರ್ಮಗುರುಗಳ ಕೆಲಸವಲ್ಲ. ಇದು ಯಾವ ಸಮಾಜಕ್ಕೂ ಗೌರವ ತರುವ ಕೆಲಸವಲ್ಲ. ಅನ್ಯಾಯವಾದಾಗ ಹೋರಾಟ ಮಾಡಲಿ. ಆದರೆ, ಅನ್ಯಾಯ ಮಾಡಿದವರ ಪರವಾಗಿ ಸ್ವಾಮೀಜಿಗಳು ಹೋರಾಟ ಮಾಡಬಾರದು ಎಂದು ಕಿವಿಮಾತು ಹೇಳಿದ್ರು.