ಕುಷ್ಟಗಿ (ಕೊಪ್ಪಳ): 2020-21ನೇ ಸಾಲಿನ ಸ್ವಯಂ ಬೆಳೆ ಸಮೀಕ್ಷೆ ಯೋಜನೆ ಆ.7ರಿಂದ ಜಾರಿಯಲ್ಲಿದ್ದು, ಆ.24ರ ಒಳಗೆ ಸಮೀಕ್ಷಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ನಾಯಕ್ ಹೇಳಿದರು.
ತಾಲೂಕಿಮ ವ್ಯಾಪ್ತಿಯ ರೈತ ಈಶ್ವರ ಗೊಲ್ಲರ್ ಅವರ ಜಮೀನಿಲ್ಲಿ ಸ್ವಯಂ ಬೆಳೆ ಸಮೀಕ್ಷೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದ ಅವರು, ಇನ್ಮುಂದೆ ರೈತರು ತಾವು ಬೆಳೆದ ಬೆಳೆಗಳ ಸಮೀಕ್ಷೆ ಮಾಡಲು ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಂಡು ಸ್ವಯಂ ಬೆಳೆ ಪರೀಕ್ಷೆ ಮಾಡಬಹುದಾಗಿದೆ.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಸರ್ವೆ ನಂಬರ್ ವಾರು, ವಿಸ್ತೀರ್ಣ, ಖುಷ್ಕಿ, ನೀರಾವರಿ ಮಾಹಿತಿಯನ್ನು ಆ್ಯಪ್ ಮೂಲಕ ಸ್ವತಃ ದಾಖಲಿಸಬಹುದು. ಮುಂಗಾರು, ಹಿಂಗಾರು ಬೇಸಿಗೆ ಹಂಗಾಮುಗಳ ಬೆಳೆ ಸಮೀಕ್ಷೆಯನ್ನು ಖಾಸಗಿ ವ್ಯಕ್ತಿಗಳ ಸಹಾಯದಿಂದ ರೈತರು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯೊಳಗೆ ರೈತರು ಬೆಳೆ ವಿವರಗಳನ್ನು ಆ.24ರೊಳಗೆ ದಾಖಲಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಕೃಷಿ ಅಧಿಕಾರಿಗಳಾದ ಬಾಲಪ್ಪ ಜಲಗೇರಿ, ಶೇಖರಯ್ಯ ಹಿರೇಮಠ, ಸೌಮ್ಯ ಪಾಟೀಲ ಮತ್ತಿತರಿದ್ದರು.