ETV Bharat / state

ರಾಜು ನಾಯಕ್‌ ನಿವಾಸದಲ್ಲಿ ಯಾವುದೇ ಸಭೆ ನಡೆದಿಲ್ಲ: ಶೈಲಜಾ - ಗಂಗಾವತಿ

ಪುಷ್ಪಾಅಮರನಾಥ ನೇತೃತ್ವದಲ್ಲಿ ರಾಜು ನಾಯಕ್ ನಿವಾಸದಲ್ಲಿ ಯಾವುದೇ ಸಭೆ ನಡೆದಿಲ್ಲ ಎಂದು ಪಕ್ಷದ ವಕ್ತಾರೆ ಶೈಲಜಾ ತಿಳಿಸಿದ್ದಾರೆ.

meeting
ಸಭೆ
author img

By

Published : Aug 30, 2020, 8:50 PM IST

ಗಂಗಾವತಿ (ಕೊಪ್ಪಳ): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಅವರ ನೇತೃತ್ವದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಮಹಿಳಾ ಕಾಂಗ್ರೆಸ್ ಸಭೆ ನಡೆದಿಲ್ಲ ಎಂದು ಕೆಪಿಸಿಸಿಯ ಮಹಿಳಾ ಸಾಮಾಜಿಕ ಜಾಲತಾಣದ ವಕ್ತಾರೆ ಶೈಲಜಾ ಹಿರೇಮಠ ತಿಳಿಸಿದ್ದಾರೆ.

ಕೆಪಿಸಿಸಿಯ ಎಸ್ಟಿ ಸೆಲ್ ರಾಜ್ಯ ಸಂಚಾಲಕ ರಾಜು ನಾಯಕ್ ನಿವಾಸಕ್ಕೆ ಪುಷ್ಪಾಅಮರನಾಥ್ ಸೌಜನ್ಯದ ಭೇಟಿ ನೀಡಿದ್ದರು. ಚಹಾ ಕುಡಿಯುವ ಉದ್ದೇಶಕ್ಕೆ ರಾಜು ನಾಯಕ್ ನಿವಾಸಕ್ಕೆ ತೆರಳಲಾಗಿತ್ತು. ಈ ಸಂದರ್ಭದಲ್ಲಿ ನಾನೂ ಹಾಜರಿದ್ದೆ. ಆದರೆ ಪಕ್ಷದ ಮುಖಂಡ ರಾಜು ನಾಯಕ್, ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಹಿಳೆಯರ ಸಭೆ ನಡೆಸಲಾಗಿದ್ದು, ಸ್ವತಃ ಅಧ್ಯಕ್ಷೆ ಪುಷ್ಪಾಅಮರನಾಥ ನೇತೃತ್ವದಲ್ಲಿ ಹಲವು ವಿಷಯ ಚರ್ಚೆ ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ತಪ್ಪು ಮಾಹಿತಿ ರವಾನಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಗೊಂದಲ ಮೂಡಿಸಲು ಯತ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ಶೀಘ್ರದಲ್ಲಿಯೇ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರ ಸಭೆನಡೆಸುವ ಯೋಜನೆ ರೂಪಿಸಲಾಗಿದೆ. ಆದರೆ ವಿನಾಕಾರಣ ನಾಯಕ್ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಶೈಲಜಾ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ಶೀಘ್ರದಲ್ಲಿಯೇ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರ ಸಭೆ ನಡೆಸುವ ಯೋಜನೆ ರೂಪಿಸಲಾಗಿದೆ. ಆದರೆ ವಿನಾಕಾರಣ ನಾಯಕ್ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಶೈಲಜಾ ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.