ಗಂಗಾವತಿ(ಕೊಪ್ಪಳ): ತಾಲೂಕಿನ ಅಂಜನಾದ್ರಿ ದೇವಸ್ಥಾನದಲ್ಲಿ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಲ್ಲಿಕೆಯಾಗಿರುವ ಹುಂಡಿ ಎಣಿಕೆ ಕಾರ್ಯ ಸೋಮವಾರ ನಡೆಯಿತು. ವಿಶೇಷ ಎಂದರೆ ಈ ಬಾರಿ ಅಮೆರಿಕದ ದಂಪತಿಗಳಿಬ್ಬರು ಹಣದ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡು ಗಮನ ಸೆಳೆದರು.
![ದದ](https://etvbharatimages.akamaized.net/etvbharat/prod-images/kn-gvt-04-28-amrican-couple-participate-in-money-count-pic-kac10005_28112022202210_2811f_1669647130_1040.jpg)
ದಿನೇ ದಿನೇ ದೇವಸ್ಥಾನಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತಿದ್ದು, ಕಾಣಿಕೆ ಹುಂಡಿಯಲ್ಲಿಯೂ ಸಹ ಏರಿಕೆ ಕಂಡಿದೆ. ಕಳೆದ 47 ದಿನದಲ್ಲಿ ಒಟ್ಟು 22.75 ಲಕ್ಷ ರೂಪಾಯಿ ಮೊತ್ತದ ಹಣ ಸಂಗ್ರಹವಾಗಿದೆ.
![ದ](https://etvbharatimages.akamaized.net/etvbharat/prod-images/kn-gvt-04-28-amrican-couple-participate-in-money-count-pic-kac10005_28112022202210_2811f_1669647130_269.jpg)
ಇತಿಹಾಸ ಪ್ರಸಿದ್ಧ ವಿಶ್ವಪಾರಂಪರಿಕ ಸ್ಥಳವಾದ ಹಂಪಿಗೆ ಬಹಳ ಹತ್ತಿರವಾಗಿದೆ. ಇದರಿಂದ ಸಾಕಷ್ಟು ವಿದೇಶಿ ಪ್ರವಾಸಿಗರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಯುಎಇ, ಬ್ರಿಟನ್, ಇಸ್ರೇಲ್, ಇಟಲಿ ಸೇರಿದಂತೆ ವಿವಿಧ 6 ದೇಶಗಳ ನಾಣ್ಯಗಳು ಕಾಣಿಕೆ ಹುಂಡಿಯಲ್ಲಿ ಸಿಕ್ಕಿವೆ. ನಾಣ್ಯಗಳ ಜೊತೆಗೆ ಆಸ್ಟೇಲಿಯಾದ 50 ಡಾಲರ್ ಮೌಲ್ಯದ ನೋಟು ಇದೆ.
![ದ](https://etvbharatimages.akamaized.net/etvbharat/prod-images/kn-gvt-04-28-amrican-couple-participate-in-money-count-pic-kac10005_28112022202210_2811f_1669647130_557.jpg)
![ದದ](https://etvbharatimages.akamaized.net/etvbharat/prod-images/kn-gvt-04-28-amrican-couple-participate-in-money-count-pic-kac10005_28112022202210_2811f_1669647130_975.jpg)
ಕಳೆದ ಬಾರಿ ಅಕ್ಟೋಬರ್ 12ರಂದು ಹುಂಡಿ ಎಣಿಕೆ ಮಾಡಿದಾಗ 18.70 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಮೊತ್ತ ಸಂಗ್ರಹವಾಗಿತ್ತು. ಹುಂಡಿ ಎಣಿಕೆ ಕಾಯರ್ವನ್ನು ಗ್ರೇಡ್-2 ತಹಶಿಲ್ದಾರ್ ವಿರೂಪಾಕ್ಷಪ್ಪ ಹೊರಪ್ಯಾಟಿ ನೇತೃತ್ವದಲ್ಲಿ ನಡೆಯಿತು.
ಇದನ್ನೂ ಓದಿ: ಕೀಟನಾಶಕ ಮಿಶ್ರಿತ ನೀರು ಸೇವನೆ.. ಮಕ್ಕಳು ಸೇರಿ 15 ಮಂದಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು