ETV Bharat / state

ಶಾಸಕ ಅಮರೇಗೌಡ ಬಯ್ಯಾಪೂರಗೆ ಹೋಮ್ ಕ್ವಾರಂಟೈನ್ - Home Quarantine

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರನ್ನು ಹೋಮ್ ಕ್ವಾರಂಟೈನ್​​ನಲ್ಲಿರಲು ಜಿಲ್ಲಾ ಆರೋಗ್ಯ ಇಲಾಖೆ ಸಲಹೆ ನೀಡಿದೆ.

Amaregauda Patil Biayapura Home Quarantine
ಶಾಸಕ ಅಮರೇಗೌಡ ಬಯ್ಯಾಪೂರ
author img

By

Published : Jul 19, 2020, 5:06 PM IST

Updated : Jul 19, 2020, 5:43 PM IST

ಕುಷ್ಟಗಿ : ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರನ್ನು ಹೋಮ್ ಕ್ವಾರಂಟೈನ್​​ನಲ್ಲಿರಲು ಜಿಲ್ಲಾ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಜುಲೈ 17ರಂದು ಕೊಪ್ಪಳದಲ್ಲಿ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಾಳ್ಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಭಾಗವಹಿಸಿದ್ದರು. ಅವರ ಪಕ್ಕದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಸಭೆಯಲ್ಲಿ ಭಾಗವಹಿಸಿದ್ದರು.

ಜುಲೈ 19ರಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ಅವರು, ಬಯ್ಯಾಪೂರ ಅವರಿಗೆ 10 ದಿನಗಳವರೆಗೆ ಹೋಮ್ ಕ್ವಾರಂಟೈನ್ ಪಾಲಿಸಲು ಸಲಹೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು, ಭಾನುವಾರ ಬಿಜಕಲ್, ಟಕ್ಕಳಕಿ ಕಂಟೇನ್​ಮೆಂಟ್​​ ಪ್ರದೇಶಕ್ಕೆ ಭೇಟಿ ನೀಡಿ ಬಂದ ಬಳಿಕ, ಆರೋಗ್ಯ ಇಲಾಖೆ ಈ ಸಲಹೆ ನೀಡಿದೆ. ಹೀಗಾಗಿ ಅವರ ಸಾರ್ವಜನಿಕ ಸಂಪರ್ಕ ತಾತ್ಕಾಲಿಕ ಮುಂದೂಡಲಾಗಿದ್ದು, ಸಾರ್ವಜನಿಕರರು ಅವರ ಮೊಬೈಲ್ ಸಂಖ್ಯೆ 9448147099 ಸಂಪರ್ಕಿಸಲು ಕೋರಿದ್ದಾರೆ.

Last Updated : Jul 19, 2020, 5:43 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.