ETV Bharat / state

ಎಲ್ಲಾ ದಿನಸಿ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಲೇಬೇಕು: ಎಸಿ ಖಡಕ್​ ವಾರ್ನಿಂಗ್​ - ದಿನಸಿ ಅಂಗಡಿಗಳು ಕಡ್ಡಾಯ ಬಂದ್

ಕಿರಾಣಿ ವರ್ತಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ತರಕಾರಿ, ದಿನಸಿ ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತುಗಳನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಗೆ ಕೈ ಜೋಡಿಸಬೇಕು.

All Grocery Stores Must Make a Bundle: AC Warning
ಎಲ್ಲಾ ದಿನಸಿ ಅಂಗಡಿಗಳು ಕಡ್ಡಾಯ ಬಂದ್ ಮಾಡಲೇ ಬೇಕು: ಎಸಿ ಖಡಕ್​ ವಾರ್ನಿಂಗ್​
author img

By

Published : Mar 30, 2020, 9:01 AM IST

ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುವ ಮುನ್ಸೂಚನೆ ಲಭ್ಯವಾಗುತ್ತಿದ್ದು, ಈ ಹಿನ್ನೆಲೆ ದಿನಸಿ ಅಂಗಡಿಗಳು ಓಪನ್ ಮಾಡಿದರೆ ಮಾಲೀಕರ ವಿರುದ್ಧ ಎಫ್ಐಆರ್ ಬುಕ್ ಮಾಡಲಾಗುವುದು ಎಂದು ಸಹಾಯಕ ಆಯುಕ್ತೆ ಸಿ.ಡಿ. ಗೀತಾ ಹೇಳಿದರು.

ನಗರದ ಮಂಥನ ಸಭಾಂಗಣದಲ್ಲಿ ಕಿರಾಣಿ ವರ್ತಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ದಿನಸಿ ಅಂಗಡಿ ತೆರೆಯುತ್ತಿರುವ ಕಾರಣಕ್ಕೆ ಜನಸಂದಣಿ ಉಂಟಾಗಿ ಅಸುರಕ್ಷತೆ ಕಾಡುತ್ತದೆ. ಸದ್ಯಕ್ಕೆ ಕೊರೊನಾ ತಡೆಗಟ್ಟುವಿಕೆಯಲ್ಲಿ ಇಡೀ ರಾಜ್ಯಕ್ಕೆ ಕೊಪ್ಪಳ ಜಿಲ್ಲೆ ಮಾದರಿಯಾಗಿದೆ. ಇದನ್ನು ಮುಂದುವರೆಸಿಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಜನರ ಪ್ರಾಣ ರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.

ಎಲ್ಲಾ ದಿನಸಿ ಅಂಗಡಿಗಳು ಕಡ್ಡಾಯ ಬಂದ್ ಮಾಡಲೇಬೇಕು: ಎಸಿ ಖಡಕ್​ ವಾರ್ನಿಂಗ್​

ತರಕಾರಿ, ದಿನಸಿ ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತುಗಳನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಗೆ ಕೈಜೋಡಿಸಬೇಕು. ನಿಗದಿತ ಬೆಲೆಗಿಂತ ಅಧಿಕ ಮೊತ್ತದ ಹಣ ವಸೂಲಿ ಮಾಡಿದರೂ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.