ಗಂಗಾವತಿ: ಖಾಸಗಿ ಮೊಬೈಲ್ ಸಂಸ್ಥೆಗಳ ಟವರ್ ಸೇರಿದಂತೆ ನೆಟ್‌ವರ್ಕ್ ಸಂಬಂಧಿತ ಕೇಬಲ್ ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಖಾಸಗಿ ನಿರ್ವಹಣಾ ಸಂಸ್ಥೆ ಇಲ್ಲಿನ ನಗರಸಭೆಗೆ 11 ಲಕ್ಷ ರೂ. ಮೊತ್ತದ ದಂಡ ಪಾವತಿಸಿದೆ.

ಕೇಬಲ್ ಅಳವಡಿಸುವ ಸಂಬಂಧ ನಗರಸಭೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಸಾರ್ವಜನಿಕ ರಸ್ತೆಯಲ್ಲಿ ಗುಂಡಿ ತೋಡಲಾಗಿತ್ತು. ಈ ಕಾಮಗಾರಿಯನ್ನು ಗುರಗಾಂವದ ಟೆಲಿಸೋನಿಕ್ ನೆಟ್‌ವರ್ಕ್ ಲಿಮಿಟೆಡ್ ಎಂಬ ಸಂಸ್ಥೆ ವಹಿಸಿಕೊಂಡಿತ್ತು.
ಈ ಬಗ್ಗೆ ಈಟಿವಿ ಭಾರತ ಫೆ.25ರಂದು ವರದಿ ಮಾಡಿದ್ದು, ಸಂಬಂಧಿತ ನಗರಸಭೆ ಅಧಿಕಾರಿಗಳ ಗಮನ ಸೆಳೆದಿತ್ತು. ಸುದೀರ್ಘ ಪತ್ರ ವ್ಯವಹಾರಗಳ ಬಳಿಕ ಇದೀಗ ಸಂಸ್ಥೆ ದಂಡ ಪಾವತಿಸಿದೆ.