ಕೋಲಾರ: ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಬಡವೆ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ, ಸುಮಾರು 12 ಮಂದಿ ಕಾರ್ಮಿಕರನ್ನ ಹೊರ ರಾಜ್ಯಗಳಿಂದ ಕರೆದುಕೊಂಡು ಬಂದಿದೆ. ಇವರೆಲ್ಲಾ ಅಲ್ಲಿ ಕ್ವಾರಂಟೈನ್ನಲ್ಲಿದ್ದ ಕಾರ್ಮಿಕರಾಗಿದ್ದಾರೆ. ಈ ಹಿನ್ನೆಲೆ ಸ್ಥಳೀಯ ಕಾರ್ಮಿಕರು ಕಂಪನಿಯಿಂದ ಹೊರ ಬಂದಿದ್ದಾರೆ.
ಮಹಾರಾಷ್ಟ್ರ ಹಾಗೂ ಪುಣೆಯಿಂದ ಸುಮಾರು 12 ಮಂದಿ ಕಾರ್ಮಿಕರು ಬಂದಿದ್ದು, ಎಲ್ಲರ ಕೈಗಳ ಮೇಲೆ ಕ್ವಾರಂಟೈನ್ ಸೀಲ್ ಹಾಕಲಾಗಿದೆ. ಅಲ್ಲದೇ ಕ್ವಾರಂಟೈನ್ ಅವಧಿ ಜುಲೈ. 13 ರವರೆಗೂ ಇದ್ದು, ಕ್ವಾರಂಟೈನ್ ಅವಧಿಯನ್ನ ಉಲ್ಲಂಘಟನೆ ಮಾಡಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವರ ಬೆಂಬಲಕ್ಕೆ ನಿಂತಿರುವ ಕಂಪನಿ ಮಾಲೀಕರು ಕಳೆದ ರಾತ್ರಿಯಿಂದ ಇವರನ್ನ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದಾರೆ. ಇದ್ರಿಂದ ಆತಂಕಕ್ಕೊಳಗಾದ ಸ್ಥಳೀಯ ಕಾರ್ಮಿಕರು ಕೆಲಸ ಮಾಡದೆ ಕಂಪನಿಯಿಂದ ಹೊರ ಬಂದು ಮಾಲೀಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕ್ವಾರಂಟೈನ್ ಅವಧಿ ಮುಗಿಯುವವರೆಗೂ ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ಆಗ್ರಹಿಸಿದ್ದಾರೆ.