ಕೋಲಾರ: ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಕೋಲಾರ ಪೊಲೀಸರು ಯಶಸ್ವಿಯಾಗಿದ್ದಾರೆ.
ವರ್ತೂರ್ ಪ್ರಕಾಶ್ ಕಿಡ್ನಾಪ್ ಆಗಿ 20 ದಿನಗಳ ನಂತರ, ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 11 ದಿನಗಳ ನಂತರ, ಆರೋಪಿ ಕವಿರಾಜ್ನನ್ನು ಕೋಲಾರ ಪೊಲೀಸರು ಬಂಧಿಸುವ ಮೂಲಕ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ಬಂಧಿತ ಆರೋಪಿ ಕವಿರಾಜ್ ಅಂಡರ್ವಲ್ಡ್ ರವಿ ಪೂಜಾರಿಯ ಬಂಟ ಎನ್ನಲಾಗಿದೆ. ಈತ ಮೂಲತಃ ತಮಿಳುನಾಡಿನ ಹೊಸೂರಿನವನಾಗಿದ್ದು, ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರ ತಂಡ ಚೇಜ್ ಮಾಡಿ ತಮಿಳುನಾಡಿನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ನಂತರ ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸುವ ಜೊತೆಗೆ ಇಡೀ ಪ್ರಕಣದ ಸತ್ಯಾಂಶವನ್ನು ಬಿಚ್ಚಿಡಲಿದ್ದಾರೆ.
ಇನ್ನು ಕಿಡ್ನಾಪ್ಗೂ ಮೊದಲು ಮಾಸ್ಟರ್ ಮೈಂಡ್ ಕವಿರಾಜ್ ಹಾಗೂ ಆತನ ಸ್ನೇಹಿತ ರೋಹಿತ್ ಜೈಲಿನಲ್ಲಿದ್ದ ಅಧಿಕಾರಿಯೊಬ್ಬರ ಮಾತು ಕೇಳಿ ವರ್ತೂರ್ ಪ್ರಕಾಶ್ ಬಳಿ ಸಾಕಷ್ಟು ಹಣವಿದೆ, ಕಳೆದ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಸಾಕಷ್ಟು ಹಣ ಮಾಡಿದ್ದಾರೆಂದು ಹೇಳಿದ್ದಾರೆ. ಅದೇ ಪ್ಲಾನ್ ವರ್ಕೌಟ್ ಮಾಡಿದ ರೋಹಿತ್ ಮತ್ತು ಕವಿರಾಜ್ ತಾವಂದುಕೊಂಡಂತೆ ವರ್ತೂರ್ ಪ್ರಕಾಶ್ರನ್ನು ಕಿಡ್ನಾಪ್ ಮಾಡಿದ್ದರು ಎನ್ನಲಾಗಿದೆ.
ಕವಿರಾಜ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ವರ್ತೂರ್ ಪ್ರಕಾಶ್, ಕಠಿಣವಾಗಿದ್ದ ಕಿಡ್ನಾಪ್ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಕೋಲಾರ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ವಿಚಾರಣೆ ವೇಳೆ ಹಣಕ್ಕಾಗಿ ನಡೆದಿತ್ತಾ ಇಲ್ಲಾ ಯಾರಾದ್ರೂ ಸುಪಾರಿ ಕೊಟ್ಟಿದ್ದರಾ ಅನ್ನೋ ಎಲ್ಲಾ ವಿಚಾರಗಳಿಗೂ ಈಗ ಉತ್ತರ ಸಿಗಲಿದೆ ಎಂದಿದ್ದಾರೆ.
ಒಟ್ಟಾರೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣ ಪೊಲೀಸರಿಗೆ ಒಂದು ದೊಡ್ಡ ಚಾಲೆಂಜ್ ಆಗಿತ್ತು. ಆದ್ರೆ ಅದನ್ನು ಭೇದಿಸಿದ ಖುಷಿ ಪೊಲೀಸರಿಗಿದ್ದರೆ, ಕಿಡ್ನಾಪ್ ಪ್ರಕರಣದಿಂದ ತನ್ನ ಸುತ್ತ ಸುತ್ತಿಕೊಂಡಿದ್ದ ಹಲವು ಅನುಮಾನಗಳಿಗೆ ತೆರೆ ಬೀಳುತ್ತೆ ಅನ್ನೋ ಸಂತೋಷ ವರ್ತೂರ್ ಪ್ರಕಾಶ್ ಅವರದ್ದು.
ಇದನ್ನೂ ಓದಿ...ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್ : ಪೊಲೀಸರಿಂದ ಮತ್ತೊಬ್ಬ ಆರೋಪಿ ಬಂಧನ