ETV Bharat / state

ಗೋಡೆ ಕೊರೆದು ಮೊಬೈಲ್​ ಅಂಗಡಿಗೆ ಕನ್ನ ಹಾಕಿದ ಖದೀಮರು - ಗೋಡೆ ಕೊರೆದು ಮೊಬೈಲ್​ ಅಂಗಡಿಗೆ ಕನ್ನ ಹಾಕಿದ ಕಳ್ಳರು

ಲಾಕ್​ಡೌನ್​ನಲ್ಲಿ ವ್ಯಾಪಾರ ಇಲ್ಲದೆ ಸಂಕಷ್ಟದಲ್ಲಿದ್ದಾಗ ಯಾರೋ ದುಷ್ಕರ್ಮಿಗಳು ಇಂತಹ ಕೆಲಸ ಮಾಡಿದ್ದಾರೆ ಎಂದು ಮೊಬೈಲ್ ಅಂಗಡಿ ಮಾಲೀಕ ಅಳಲು ತೋಡಿಕೊಂಡಿದ್ದಾರೆ..

thieves-brakes-store-wall-and-stolen-mobile-in-srinivaspur
ಮೊಬೈಲ್​ ಅಂಗಡಿ ಕಳ್ಳತನ
author img

By

Published : Jun 18, 2021, 4:38 PM IST

ಕೋಲಾರ : ಅಂಗಡಿಯ ಹಿಂಬದಿಯ ಗೋಡೆ ಕೊರೆದು ಲಕ್ಷಾಂತರ ರೂ. ಮೌಲ್ಯದ ಮೊಬೈಲ್​ಗಳನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ನಗರದ ಎಂ ಜಿ ರಸ್ತೆಯಲ್ಲಿ ನಡೆದಿದೆ. ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮದ ಪುಟ್ಟಣ್ಣ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿ ಇದಾಗಿದೆ. ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಮೊಬೈಲ್​ಗಳು ಕಳ್ಳತನವಾಗಿವೆ‌. ಕಳೆದ ರಾತ್ರಿ ಕಳ್ಳತನ ಜರುಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಶಾಪ್ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

ಗೋಡೆ ಕೊರೆದು ಮೊಬೈಲ್​ ಅಂಗಡಿಗೆ ಕನ್ನ ಹಾಕಿದ ಖದೀಮರು

ಸಾಲ-ಸೂಲ ಮಾಡಿ ಅಂಗಡಿ ಮಾಡಿದ್ದೆ. ಲಾಕ್​ಡೌನ್​ನಲ್ಲಿ ವ್ಯಾಪಾರ ಇಲ್ಲದೆ ಸಂಕಷ್ಟದಲ್ಲಿದ್ದಾಗ ಯಾರೋ ದುಷ್ಕರ್ಮಿಗಳು ಇಂತಹ ಕೆಲಸ ಮಾಡಿದ್ದಾರೆ ಎಂದು ಮೊಬೈಲ್ ಅಂಗಡಿ ಮಾಲೀಕ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.