ಕೋಲಾರ: ಗಿರವಿ ಅಂಗಡಿಯ ಬೀಗ ಮುರಿದು ನಗ ನಾಣ್ಯ ಕಳ್ಳತನ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಟೇಕಲ್ನಲ್ಲಿ ನಡೆದಿದೆ.
ಕಳೆದ ರಾತ್ರಿ ಟೇಕಲ್ನಲ್ಲಿ ಕಳ್ಳರ ಕೈಚಳಕ ನಡೆದಿದ್ದು, ರಾಜಲಕ್ಷ್ಮಿ ಪಾನ್ ಬ್ರೋಕರ್ ಅಂಗಡಿಯಲ್ಲಿ ಸುಮಾರು ಒಂದೂವರೆ ಲಕ್ಷ ಮೌಲ್ಯದ ಬೆಳ್ಳಿ ಒಡವೆಗಳು ಹಾಗೂ 15 ಸಾವಿರ ನಗದು ಕಳ್ಳತನ ಮಾಡಿದ್ದಾರೆ.
ಅಷ್ಟೇ ಅಲ್ಲದೇ, ಕಳ್ಳರು ಮೆಡಿಕಲ್ ಸ್ಟೋರ್, ಬ್ಯೂಟಿ ಪಾರ್ಲರ್ ಸೇರಿ ಮೂರು ಅಂಗಡಿಗಳ ಬೀಗ ಒಡೆದಿದ್ದಾರೆ. ಸದ್ಯ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.