ETV Bharat / state

ಎಪಿಎಂಸಿ ಮಾರುಕಟ್ಟೆ ಪ್ರವೇಶಕ್ಕೆ ಕಟ್ಟುನಿಟ್ಟಿನ ಕ್ರಮ: ಸಂಸದ ಮುನಿಸ್ವಾಮಿ - ಸಂಸದ ಎಸ್.ಮುನಿಸ್ವಾಮಿ ಸಭೆ

ನಗರದ ಎಪಿಎಂಸಿ ಮಾರುಕಟ್ಟೆ ಪ್ರವೇಶಕ್ಕೆ ಮಾಸ್ಕ್ ಹಾಗೂ ಜಿಲ್ಲಾಡಳಿತ ನೀಡುವ ಗುರುತಿನ ಚೀಟಿ ಖಡ್ಡಾಯ ಮಾಡಲಾಗಿದೆ ಎಂದು ಸಂಸದ ಎಸ್​. ಮುನಿಸ್ವಾಮಿ ಸೂಚಿಸಿದರು.

mp s.muniswami
ಸಂಸದ ಎಸ್.ಮುನಿಸ್ವಾಮಿ
author img

By

Published : Mar 25, 2020, 10:30 PM IST

ಕೋಲಾರ: ನಗರದ ಎಪಿಎಂಸಿ ಮಾರುಕಟ್ಟೆ ಪ್ರವೇಶಕ್ಕೆ ಮಾಸ್ಕ್ ಹಾಗೂ ಜಿಲ್ಲಾಡಳಿತ ನೀಡುವ ಗುರುತಿನ ಚೀಟಿ ಖಡ್ಡಾಯ ಮಾಡಲಾಗಿದೆ ಎಂದು ಸಂಸದ ಎಸ್​. ಮುನಿಸ್ವಾಮಿ ತಿಳಿಸಿದ್ದಾರೆ.

ಎಪಿಎಂಸಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಂಸದ ಎಸ್. ಮುನಿಸ್ವಾಮಿ

ಎಪಿಎಂಸಿ ಕಚೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಟ್ಟುನಿಟ್ಟಿನ ನಿರ್ಬಂಧನೆಗಳ ಮೂಲಕ ರೈತರಿಗೆ, ವ್ಯಾಪಾರಸ್ಥರಿಗೆ, ವರ್ತಕರಿಗೆ ಎಪಿಎಂಸಿ ಮಾರುಕಟ್ಟೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

ತರಕಾರಿ ಕೊಳ್ಳುವವರಿಗೆ ಟೋಕನ್ ನೀಡುವುದರೊಂದಿಗೆ ಒಂದು ಬಾರಿಗೆ ಐವತ್ತು ಜನರಂತೆ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ವ್ಯಾಪಾರದ ಸಮಯದಲ್ಲಿ ಇಬ್ಬರ ಮಧ್ಯೆ ಅಂತರ ಕಾಯ್ದುಕೊಳ್ಳಬೇಕು. ವ್ಯಾಪಾರಸ್ಥರು ತರಕಾರಿಗಳನ್ನ ಮುಟ್ಟಬಾರದು ಎಂದು ಸೂಚಿಸಿದರು.

ಮೊದಲು ಕರ್ನಾಟಕಕ್ಕೆ ಆದ್ಯತೆ ನೀಡಿ, ನಂತರ ಉಳಿದ ತರಕಾರಿಯನ್ನ ಬೇರೆ ರಾಜ್ಯಗಳಿಗೆ ರಫ್ತು ಮಾಡಬೇಕೆಂದು ಎಪಿಎಂಸಿ ಸಮಿತಿಗೆ ಸೂಚಿಸಿದ್ದು, ರೈತರು ಬೆಳೆದ ತರಕಾರಿಗಳನ್ನು ನೇರವಾಗಿ ಅವರೇ ಮಾರುಕಟ್ಟೆಗೆ ಸಾಗಿಸದೆ, ವರ್ತಕರಿಗೆ ಕರೆ ಮೂಲಕ ಮಾಹಿತಿ ನೀಡಬೇಕು. ವ್ಯವಹಾರದ ಹಣವನ್ನು ಆರ್​ಟಿಸಿಎಸ್ ಮೂಲಕ ರೈತರ ಖಾತೆಗಳಿಗೆ ಸೇರುವಂತಹ ವ್ಯವಸ್ಥೆ ಮಾಡಬೇಕೆಂದು ಸಂಸದರು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಸೇರಿದಂತೆ ಎಪಿಎಂಸಿ ಅಧ್ಯಕ್ಷರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.