ETV Bharat / state

ಕಾರ್ಯಕರ್ತರು, ಮುಖಂಡರಿಗಾಗಿ ಅಭಿನಂದನಾ ಸಮಾರಂಭ: ಮುನಿರತ್ನಗೆ ಕುರಿಮರಿ ಉಡುಗೆ - ಮುಖಂಡರಿಗಾಗಿ ಅಭಿನಂದನಾ ಸಮಾರಂಭ

ಸಚಿವ ಮುನಿರತ್ನ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಅಭಿನಂದನಾ ಸಮಾರಂಭವನ್ನು ಕೋಲಾರದಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರಿಗೆ ಕುರಿಮರಿಯನ್ನು ಉಡುಗೊರೆಯಾಗಿ ನೀಡಲಾಯಿತು. ಅವರು ಇಂದು ಸುಮಾರು 1500 ಜನರಿಗೆ ಬಿರಿಯಾನಿ ಊಟ ಹಾಕಿಸಿದರು.

Sheep was given to minister Muniratna as a gift
ಮುನಿರತ್ನಗೆ ಕುರಿಮರಿ ಉಡುಗೆಯಾಗಿ ನೀಡಿದ ಕಾರ್ಯಕರ್ತರು
author img

By

Published : Sep 18, 2022, 6:39 PM IST

ಕೋಲಾರ: ಬಿಜೆಪಿಯಿಂದ ಆಯೋಜನೆ ಮಾಡಿದ್ದ ಜನೋತ್ಸವ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆ ಭಾನುವಾರ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಅಭಿನಂದನಾ ಸಮಾರಂಭವನ್ನು ಕೋಲಾರದಲ್ಲಿ ಆಯೋಜನೆ ಮಾಡಲಾಗಿತ್ತು. ಕೋಲಾರ ತಾಲೂಕಿನ ಕೆಂದಟ್ಟಿ ಬಳಿ ಸುಮಾರು1,500 ಜನ ಕಾರ್ಯಕರ್ತರಿಗೆ ಸಚಿವ ಮುನಿರತ್ನ ಬಿರಿಯಾನಿ ಬಾಡೂಟ ಹಾಕಿಸಿದರು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 1,500 ಜನ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಮುನಿರತ್ನ ಅವರನ್ನು ತೆರೆದ ವಾಹನದಲ್ಲಿ ಪಟಾಕಿ ಸಿಡಿಸಿ, ಸೇಬಿನ​ ಹಾರ ಹಾಕಿ ಕರೆತಂದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮುನಿರತ್ನ ಅವರಿಗೆ ಕಂಬಳಿ ಹೊದಿಸಿ, ಕುರಿಮರಿ ಉಡುಗೆಯಾಗಿ ನೀಡಿದರು.

ಮುನಿರತ್ನಗೆ ಕುರಿಮರಿ ಉಡುಗೆ

ಇದೇ ವೇಳೆ ಮಾತನಾಡಿದ ಮುನಿರತ್ನ, ಕಾರ್ಯಕ್ರಮ ಯಶಸ್ವಿಗೊಳಿಸಿದ ಹಿನ್ನೆಲೆ ಇಂದು ನಾನು ವೈಯಕ್ತಿಕವಾಗಿ ಬಾಡೂಟ ಹಾಕಿಸುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಮಾಲೂರು ಮಂಜುನಾಥಗೌಡ, ಕೋಲಾರ ವರ್ತೂರ್​ ಪ್ರಕಾಶ್​, ಕೆಜಿಎಫ್​​ ವೈ ಸಂಪಂಗಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ: ಇಷ್ಟೊತ್ತಿಗೆ ಸಿದ್ದರಾಮಯ್ಯನವರು ಜೈಲಿನಲ್ಲಿರಬೇಕಿತ್ತು.. ಸಚಿವ ಮುನಿರತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.