ETV Bharat / state

ಸರ್ಕಾರಿ ವಸತಿ ಶಾಲೆಗಳಲ್ಲಿ ಆರ್​ಎಸ್​ಎಸ್​ ತಾಲೀಮು ಶಿಬಿರ.. ಎಸ್​ಎಫ್​ಐ ಆರೋಪ - ಎಸ್​ಎಫ್​ಐ ಎಚ್ಚರಿಕೆ

ವಸತಿ ಶಾಲೆಗಳಲ್ಲಿ 'ರಾಷ್ಟ್ರೀಯ ಚಿಂತನೆ, ಯೋಗಾಸನ ದೈಹಿಕ ಹಾಗೂ ಬೌದ್ಧಿಕ ವ್ಯಕ್ತಿತ್ವ ವಿಕಸನ ಶಿಬಿರ' ಆಯೋಜಿಸಲಾಗಿದೆ. ಇದು ಆರ್​ಎಸ್​ಎಸ್​ ತಾಲೀಮು ಶಿಬಿರ ಎಂಬ ಆರೋಪ ಕೇಳಿಬಂದಿದೆ.

ಆರ್​ಎಸ್​ಎಸ್​ ತಾಲೀಮು ಶಿಬಿರ
ಆರ್​ಎಸ್​ಎಸ್​ ತಾಲೀಮು ಶಿಬಿರ
author img

By

Published : Oct 11, 2022, 8:27 AM IST

Updated : Oct 11, 2022, 11:49 AM IST

ಕೋಲಾರ: ಮೊರಾರ್ಜಿ ದೇಸಾಯಿ ಸರ್ಕಾರಿ ವಸತಿ ಶಾಲೆಗಳಲ್ಲಿ 'ರಾಷ್ಟ್ರೀಯ ಚಿಂತನೆ, ಯೋಗಾಸನ ದೈಹಿಕ ಹಾಗೂ ಬೌದ್ಧಿಕ ವ್ಯಕ್ತಿತ್ವ ವಿಕಸನ ಶಿಬಿರ' ಆಯೋಜಿಸಲಾಗಿದ್ದು, ಇದು ಆರ್​ಎಸ್​ಎಸ್​ ತಾಲೀಮು ಶಿಬಿರ ಎಂದು ಎಸ್​ಎಫ್​ಐ ಸಂಘಟನೆ ಆರೋಪಿಸಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೂತಾಂಡ್ಲಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಶಿಬಿರಿ ಆಯೋಜಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಕೋಲಾರ ಮತ್ತು ಉತ್ತರ ಕನ್ನಡ, ಬೀದರ್ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಆರ್​ಎಸ್​ಎಸ್​ ತರಬೇತಿ ಶಿಬಿರ ನಡೆಸಲು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೇ ಶಿಫಾರಸ್ಸು ಮಾಡಿ ಅನುಮತಿ ನೀಡಿದ್ದಾರೆ. ಇದು ಶಿಕ್ಷಣ ಕೇಸರೀಕರಣದ ಭಾಗವಾಗಿದೆ. ಸರ್ಕಾರಿ ಶಾಲೆಗಳನ್ನು ಆರ್​ಎಸ್​ಎಸ್​ಗೆ ಬಿಟ್ಟು ಕೊಡುವುದು ಅಪಾಯಕಾರಿಯಾಗಿದೆ. ರಾಜ್ಯ ಸರ್ಕಾರವು ಇದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಸ್​ಎಫ್​ಐ ರಾಜ್ಯ ಕಾರ್ಯದರ್ಶಿ ವಾಸುದೇವ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಎಸ್​ಎಫ್​ಐ ರಾಜ್ಯ ಕಾರ್ಯದರ್ಶಿ ವಾಸುದೇವ್ ರೆಡ್ಡಿ

ಅಲ್ಲದೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿರುವ ಎಸ್​​ಎಫ್​ಐ ಮುಖಂಡರು, ಈಗಾಗಲೇ ಹಿಜಾಬ್ ವಿವಾದ ಸೇರಿದಂತೆ ಪಠ್ಯಪುಸ್ತಕಗಳ ಹೆಸರಿನಲ್ಲಿ ಕೋಮುವಾದ ಹುಟ್ಟುಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಇದೀಗ ಶಿಬಿರಗಳನ್ನು ನಡೆಸುವ ಮೂಲಕ ಸಮಾಜಘಾತುಕ‌ ಕೆಲಸಗಳಿಗೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಚಿವರ ಶಿಫಾರಸ್ಸು
ಸಚಿವರ ಶಿಫಾರಸ್ಸು

ಕೋಲಾರದಲ್ಲಿ ಪ್ರೇರಣಾ ಪ್ರತಿಷ್ಠಾನದ ಹೆಸರಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಷಯ್ ಸೇವಾ ಪ್ರತಿಷ್ಠಾನದ ಹೆಸರಲ್ಲಿ ಶಿಬಿರಕ್ಕೆ ಅನುಮತಿ ನೀಡಲಾಗಿದೆ. ಈ ಶಿಬಿರದಲ್ಲಿ ಯುವಕರಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಯೋಗಾಸನ, ರಾಷ್ಟ್ರೀಯ ಚಿಂತನೆ ಕುರಿತು ತರಬೇತಿ ನೀಡುವುದಾಗಿ ಉಲ್ಲೇಖಿಸಲಾಗಿದೆ. ಅ.7 ರಂದು ಪ್ರಾರಂಭವಾಗಿರುವ ಈ ಶಿಬಿರ ಒಂದು ವಾರಗಳ ಕಾಲ‌ ನಡೆಯಲಿದೆ. ಈ ಶಿಬಿರ ಆಯೋಜನೆಗೆ ಎಸ್​​ಎಫ್ಐ ಸಂಘಟನೆಯ ವಿರೋಧ ವ್ಯಕ್ತಪಡಿಸುತ್ತಿದೆ.

(ಓದಿ: ಆರ್​ಎಸ್​ಎಸ್​ ಪಥ ಸಂಚಲನದಲ್ಲಿ ಮುಸ್ಲಿಮರಿಂದ ಹೆಡ್ಗೆವಾರ್​ ಭಾವಚಿತ್ರಕ್ಕೆ ಪುಷ್ಪಾರ್ಚನೆ)

Last Updated : Oct 11, 2022, 11:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.