ಕೋಲಾರ: ಲವ್ ಜಿಹಾದ್ ಬಗ್ಗೆ ಎಷ್ಟೇ ಹೇಳಿದ್ರೂ ಕಾಂಗ್ರೆಸ್ನವರು ಇನ್ನೂ ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ದಿನನಿತ್ಯ ಅಮಾಯಕ ಹೆಣ್ಣು ಮಕ್ಕಳು ಬಲಿಯಾಗ್ತಿದ್ದಾರೆ. ನಾನು ಗೃಹ ಸಚಿವನಾಗಿದ್ದಾಗ ಈ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಕೋಲಾರದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದರು.
ಪಿಎಫ್‌ಐ ಸಂಘಟನೆ ನಿಷೇಧಗೊಂಡ ಬಳಿಕ ಲವ್ ಜಿಹಾದ್‌ಗೆ ಕೈ ಹಾಕಿದೆಯೇ ಎಂಬ ಪ್ರಶ್ನೆಗೆ, ಮೊದಲು ಇದರ ಬಗ್ಗೆ ಟ್ರೈನಿಂಗ್ ನೀಡಲಾಗುತ್ತದೆ. ಒಬ್ಬ ಹಿಂದೂ ಯುವತಿಯನ್ನು ಮತಾಂತರ ಮಾಡಿದರೆ ನಾಲ್ಕೈದು ಲಕ್ಷ ರೂಪಾಯಿ ನೀಡಲಾಗುತ್ತಿದೆ. ಮುಸ್ಲಿಂ ಯುವಕರು ಬಾಡಿ ಬಿಲ್ಡಿಂಗ್, ಜಿಮ್, ಸಿನಿಮಾಗೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಿದ್ದಾರೆ. ಮತಾಂತರ ಆದ ಬಳಿಕ ಕೆಲವೇ ತಿಂಗಳಲ್ಲಿ ಇನ್ನೆರಡು ಮದುವೆ ಆಗ್ತಿದ್ದಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಈ ಕುರಿತು ಸಿಎಂ ಜತೆ ಚರ್ಚಿಸುತ್ತೇನೆ. ದೇಶದ್ರೋಹಿ ಸಂಘಟನೆಗಳನ್ನು ಮಟ್ಟ ಹಾಕಲಾಗುವುದು ಎಂದು ಅವರು ಹೇಳಿದರು.
ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ: ತಮಿಳುನಾಡು ರಾಜ್ಯದಲ್ಲಿ ದೇವಸ್ಥಾನಗಳಲ್ಲಿ ಮೊಬೈಲ್ ನಿರ್ಬಂಧಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊಬೈಲ್ ನಿಷೇಧಿಸಿರುವುದು ಒಳ್ಳೆಯದು. ಸಚಿವೆ ಶಶಿಕಲಾ ಜೊಲ್ಲೆಯವರ ಬಳಿ ನಾನು ಸಹ ಚರ್ಚೆ ಮಾಡುತ್ತೇನೆ. ಮೊಬೈಲ್‌ನಿಂದ ಪುಜಾರಿಗಳು ಮಂತ್ರ ಹೇಳೋದಕ್ಕೂ ಕಷ್ಟವಾಗ್ತಿದೆ. ನಮ್ಮ ರಾಜ್ಯದ ದೇವಸ್ಥಾನಗಳಲ್ಲೂ ಮೊಬೈಲ್ ಬಂದ್ ಮಾಡಿದರೆ ಒಳ್ಳೆಯದು ಎಂದರು.
ಸಿದ್ದರಾಮಯ್ಯ ಡಿಕೆಶಿ ನಡುವೆ ಬೀದಿ ರಂಪಾಟ: ಗುಜರಾತ್ನಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಸಿದ್ದು ಡಿಕೆಶಿ ನಡುವೆ ಬೀದಿ ರಂಪಾಟ ಶುರುವಾಗಿದೆ. ಅದಕ್ಕಾಗಿ ದೆಹಲಿಗೆ ಹೋದ್ರು. ಆದರೂ ಅವರ ಜಗಳ ನಿಂತಿಲ್ಲ ಎಂದರು. ಇದೇ ವೇಳೆ, ಜನರು ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಬಯಸಿದ್ದಾರೆ ಎಂದು ತಿಳಿಸಿದರು. ಯಡಿಯೂರಪ್ಪ ಅವರನ್ನು ನಾವು ಎಲ್ಲೂ ಕಡೆಗಣಿಸಿಲ್ಲ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂಓದಿ:ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷರ ಬಂಧನ: ರಾಜಕೀಯ ಷಡ್ಯಂತ್ರ ಎಂದ ಧರ್ಮೇಂದ್ರ