ETV Bharat / state

'ರಾಮಕೋಟಿ' ಬರೆದು ಭದ್ರಾಚಲಂಗೆ ಯಾತ್ರೆ ಬೆಳೆಸಿದ ಕೋಲಾರದ ಮುಸ್ಲಿಂ ವ್ಯಕ್ತಿ!

ಮುಸ್ಲಿಂ ಸಮುದಾಯದಲ್ಲಿ ಜನಿಸಿ ಸುಮಾರು 20 ವರ್ಷಗಳ ಕಾಲ ರಾಮನ ಜಪ ಮಾಡುತ್ತಾ, ರಾಮನಾಮವನ್ನು ಕೋಟಿ ಬಾರಿ ಬರೆದ ಮುಸ್ಲಿಂ ವ್ಯಕ್ತಿ ಈಗ ಭದ್ರಾಚಲಂ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

Ramakoti written by muslim person in Kolar
ರಾಮಕೋಟಿ ಬರೆದು ಭದ್ರಾಚಲಂಗೆ ಯಾತ್ರೆ ಬೆಳೆಸಿದ ಕೋಲಾರದ ಮುಸ್ಲಿಂ ವ್ಯಕ್ತಿ
author img

By

Published : Mar 30, 2022, 6:59 PM IST

ಕೋಲಾರ: ಇತ್ತೀಚೆಗೆ ಕೋಮು ಸಾಮರಸ್ಯ ಕದಡುವ ಘಟನೆಗಳು ಮರುಕಳಿಸುತ್ತಿವೆ. ಹಿಜಾಬ್ ವಿಚಾರದಿಂದ ಹಲಾಲ್​ವರೆಗೆ ಒಂದಲ್ಲಾ ಒಂದು ರೀತಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಹಿಂದೂ-ಮುಸ್ಲಿಂ ಸಾಮರಸ್ಯ ಮೆರೆದಿರುವ ಘಟನೆ ಚಿನ್ನದ ಬೀಡು ಕೋಲಾರದಲ್ಲಿ ಬೆಳಕಿಗೆ ಬಂದಿದೆ. ರಾಮಭಕ್ತನಾದ ಮುಸ್ಲಿಂ ವ್ಯಕ್ತಿ ಪಾಚಾ ಸಾಬಿ ಎಂಬುವರು ರಾಮಕೋಟಿ ಬರೆದು, ರಾಮನಾಮವನ್ನು ಶ್ರೀರಾಮನ ಸನ್ನಿಧಾನವಾದ ಭದ್ರಾಚಲಂಗೆ ಕೊಂಡೊಯ್ಯಲು ಗ್ರಾಮಸ್ಥರೊಂದಿಗೆ ತೆರಳಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಮುಸ್ಲಿಂ ಸಮುದಾಯದಲ್ಲಿ ಜನಿಸಿ ಸುಮಾರು 20 ವರ್ಷಗಳ ಕಾಲ ರಾಮನ ಜಪ ಮಾಡುತ್ತಾ, ರಾಮನಾಮವನ್ನು ಕೋಟಿ ಬಾರಿ ಬರೆದ ಭಂಡಾರವನ್ನು ಗ್ರಾಮಸ್ಥರ ಸಹಕಾರದಿಂದ ಭದ್ರಾಚಲಂಗೆ ಸಮರ್ಪಿಸಲು ಪಾಚಾ ಸಾಬಿ ಪ್ರಯಾಣ ಬೆಳೆಸಿದ್ದಾರೆ. ನಿತ್ಯ ಶ್ರೀರಾಮನನ್ನೇ ಆರಾಧಿಸುವ ಪಾಚಾ ಸಾಬಿ ಶ್ರೀರಾಮ ನಾಮವನ್ನು ಕೋಟಿ ಸಾರಿ ಬರೆದು ರಾಮನ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ರಾಮಕೋಟಿ ಬರೆದ ಕೋಲಾರದ ಮುಸ್ಲಿಂ ವ್ಯಕ್ತಿ ಪಾಚಾ ಸಾಬಿ

ಎಲ್ಲಾ ಜಾತಿ ಒಂದೇ ಎಂಬ ಭಾವನೆಯಿಂದ ಶ್ರೀರಾಮನನ್ನು ಆರಾಧಿಸುತ್ತಾ ಪಾಚಾ ಸಾಬಿ ರಾಮನ ಪರಮಭಕ್ತನಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಪಾಚಾ ಸಾಬಿ 'ಪಂಡಿತ ಪಾಚಾ ಸಾಬಿ' ಎಂದೇ ಚಿರಪರಿಚಿತರು. ಕನ್ನಡದಲ್ಲಿ ಲೋವರ್ ಸೆಕೆಂಡರಿ ಪಾಸಾಗಿ, ಮೈಸೂರು ಮಹಾರಾಜರ ಕಾಲದಲ್ಲಿ ಕೋಲಾರ ಜಿಲ್ಲೆಯ ಜಕ್ಕರಸಕುಪ್ಪ, ರಾಮನಗರ ಜಿಲ್ಲೆಯ ಅಂಚೆಕೆಂಪನದೊಡ್ಡಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಪಾಧ್ಯಾಯರಾಗಿ ನಂತರ ಮುಖ್ಯೋಪಾಧ್ಯಾಯರಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ಪಾಚಾ ಸಾಬಿ ನಿವೃತ್ತರಾಗಿದ್ದಾರೆ.

97 ವರ್ಷ ವಯಸ್ಸಾದರೂ ಪಾಚಾ ಸಾಬಿ ಪ್ರತಿ ದಿನ ನಮಾಜ್ ಮಾಡಿ, ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡುತ್ತಿದ್ದರು. ರಾಮನಾಮವನ್ನು ಕೋಟಿ ಸಾರಿ ಬರೆದಿದ್ದು, ಅವುಗಳನ್ನು ನನ್ನ ಮನೆಯಲ್ಲಿ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ರಾಮಕೋಟಿಯನ್ನು ಅಯೋಧ್ಯೆ ಅಥವಾ ಭದ್ರಾಚಲಂ ದೇವಸ್ಥಾನಕ್ಕೆ ತಲುಪಿಸಬೇಕು ಅನ್ನೋದು ಅವರ ಬಹುವರ್ಷಗಳ ಬಯಕೆಯಾಗಿದೆ. ಪಾಚಾ ಸಾಬಿ‌ ಕನಸನ್ನು ಗ್ರಾಮಸ್ಥರು ನನಸು ಮಾಡಿದ್ದು, ಮಿನಿ ಬಸ್ ಮಾಡಿ ಅವರೊಂದಿಗೆ ಭದ್ರಾಚಲಂಗೆ ತೆರಳಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕ, ಭೀಮನ‌ ಲೆಕ್ಕದ ಸ್ವಾರಸ್ಯಕರ ಚರ್ಚೆ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.