ETV Bharat / state

ಕೋಲಾರದಲ್ಲಿ ಅಪ್ಪು ಅಭಿಮಾನಿಗಳಿಂದ ನೇತ್ರದಾನ, ರಕ್ತದಾನ ಹಾಗೂ ಅನ್ನಸಂತರ್ಪಣೆ - ಕೋಲಾರದಲ್ಲಿ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಂದ ಅನ್ನಸಂತರ್ಪಣೆ

ಕೋಲಾರದ ಹೊಸ ಬಸ್ ನಿಲ್ದಾಣದ ಆಂಜನೇಯ ದೇವಾಲಯದ ಮುಂದೆ ಅಪ್ಪು ಸ್ಮರಣೆ ಕಾರ್ಯಕ್ರಮ ನಡೆಯಿತು.

puneeth rajkumar fans arrange blood donation camp
ಅಭಿಮಾನಿಗಳಿಂದ ನೇತ್ರದಾನ, ರಕ್ತದಾನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ
author img

By

Published : Nov 8, 2021, 3:51 PM IST

ಕೋಲಾರ: ಪುನೀತ್ ರಾಜ್​​ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಅವರ ಅಭಿಮಾನಿಗಳು ನೇತ್ರದಾನ, ರಕ್ತದಾನ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡರು.

ಪುನೀತ್ ಅಭಿಮಾನಿಗಳು ಬೆಳಗ್ಗೆಯಿಂದಲೇ ಜಮಾಯಿಸಿ‌ ರಕ್ತದಾನ ಮಾಡಿ ಅಪ್ಪುಗೆ ಜೈಕಾರ ಹಾಕಿದರು. ಇದೇ ವೇಳೆ ನೂರಾರು ಕಾರ್ಯಕರ್ತರು ಹಾಗೂ ಯುವಕರು ಸ್ವಯಂಪ್ರೇರಣೆಯಿಂದ ಆಗಮಿಸಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದರು.

ಕೋಲಾರ ತಾಲೂಕಿನ ಹರಳಕುಂಟೆ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳ ಸಂಘದಿಂದ ಚಿಕನ್​ ಬಿರಿಯಾನಿ ಮಾಡಿ ವಿತರಿಸಲಾಯಿತು. ಗ್ರಾಮದ ದ್ವಾರಬಾಗಿಲ ಬಳಿ ಅಪ್ಪು ಅವರ ಬೃಹತ್ ಭಾವಚಿತ್ರವನ್ನು‌ ನಿರ್ಮಾಣ ಮಾಡಿ ಪುಷ್ಪಾರ್ಚನೆ ಮಾಡಿದರು. ಮಕ್ಕಳು ಸೇರಿದಂತೆ‌ ನೂರಾರು ಜನರು ಭಾಗವಹಿಸಿ ಪುನೀತ್ ರಾಜ್‌ಕುಮಾರ್​​ಗೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.

ಇದನ್ನೂ ಓದಿ:ಪವರ್ ಸ್ಟಾರ್ ಪುಣ್ಯಸ್ಮರಣೆ: ಅಭಿಮಾನಿಗಳಿಗೆ 'ಅನ್ನದಾನ' ಮಾಡಿದ ಶಿವಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.