ಕೋಲಾರ : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಬಿಜೆಪಿ ಕಾರ್ಯಕರ್ತರು ದೇಶದೆಲ್ಲೆಡೆ ವಿಭಿನ್ನವಾಗಿ ಆಚರಿಸಿದ್ದಾರೆ. ಅದರಂತೆ ಜಿಲ್ಲೆಯ ಮಾಲೂರಿನಲ್ಲಿ ಬಿಜೆಪಿ ಕಾರ್ಯಕರ್ತರು ತಮಿಳುನಾಡು ಮಾದರಿಯಲ್ಲಿ, ಇಂದು ಜನಿಸಿದ ನವಜಾತ ಶಿಶುಗಳಿಗೆ ಚಿನ್ನದ ಉಂಗುರಗಳನ್ನು ವಿತರಣೆ ಮಾಡಿ ಮೋದಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಮಾಲೂರು ತಾಲೂಕಿನಲ್ಲಿ ಇಂದು ಜನಿಸಿದ ಸುಮಾರು 25ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ಚಿನ್ನದುಂಗುರ ವಿತರಣೆ ಮಾಡುವ ಮೂಲಕ ಗಮನ ಸೆಳೆದರು. ಮಾಲೂರು ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಹುಟ್ಟಿದ ಮಕ್ಕಳಿಗೆ ವಕ್ಫ್ ಬೋರ್ಡ್ ವೈಸ್ ಚೇರ್ಮನ್ ಅಜ್ಗರ್ ಹಾಗೂ ಮಾಜಿ ಶಾಸಕ ಮಂಜುನಾಥ್ ಗೌಡ ಅಭಿಮಾನಿ ಬಳಗದ ಚಂದ್ರಶೇಖರ್ ಅವರು ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಖುದ್ದು ಬಿಜೆಪಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರಿಗೆ ಉಂಗುರ, ಹಣ್ಣು ಹಂಪಲು ನೀಡಿ ವಿಶೇಷವಾಗಿ ಮೋದಿ ಹುಟ್ಟು ಹಬ್ಬವನ್ನು ಆಚರಿಸಿದರು.
ಇದನ್ನೂ ಓದಿ :ಹೈದರಾಬಾದ್ ಕರ್ನಾಟಕದ ಕರಾಳ ದಿನಗಳು: ಹೇಗಿತ್ತು ಆ ಒಂದು ವರ್ಷದ ಹೋರಾಟ