ETV Bharat / state

ಹೊಸ ಮನೆ ಅಂದಕ್ಕೆ ಅಡ್ಡಿಯಾದ ಹಳೆ ಮನೆ, ರಾತ್ರೋರಾತ್ರಿ ನೆಲಸಮ - ಕೋಲಾರ ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮ

ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ದಾಖಲೆಗಳು ನಮ್ಮ ಬಳಿ ಇದೆ. ಆದರೆ ದೌರ್ಜನ್ಯದಿಂದ ನಮ್ಮ ಮನೆ ನೆಲಸಮ ಮಾಡಿದ್ದಾರೆ. ದೌರ್ಜನ್ಯ ನಡೆಸಿದವರ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದರು. ಈ ಬಗ್ಗೆ ವೇಮಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

house-demolished-in-kolar
ಹೊಸ ಮನೆ ಅಂದಕ್ಕೆ ಅಡ್ಡಿಯಾದ ಹಳೆ ಮನೆ,
author img

By

Published : Mar 6, 2021, 4:02 PM IST

ಕೋಲಾರ: ಕಟ್ಟಿಸುತ್ತಿರುವ ಹೊಸ ಮನೆಗೆ ಪಕ್ಕದ ನಿವೇಶನದಲ್ಲಿ ಇದ್ದ ಹಳೆ ಮನೆ ಅಡ್ಡಿಯಾಗಿದೆ ಎಂದು, ಮನೆ ಮಾಲೀಕರಿಗೆ ಮಾಹಿತಿ ನೀಡದೇ ರಾತ್ರೋರಾತ್ರಿ ಹಳೆ ಮನೆ ನೆಲಸಮ ಮಾಡಿರುವ ಘಟನೆ ಕೋಲಾರ ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮದಲ್ಲಿ ನಡೆದಿದೆ.

ಹೊಸ ಮನೆ ಅಂದಕ್ಕೆ ಅಡ್ಡಿಯಾದ ಹಳೆ ಮನೆ,

ಓದಿ: ಪುತ್ರನ ವಿಡಿಯೋ ಹಂಚಿಕೊಂಡ ಯಶ್​​​​​...ಅಥರ್ವನ ತೊದಲು ಮಾತಿಗೆ ನೆಟಿಜನ್ಸ್ ಫಿದಾ

ಗ್ರಾಮ ಪಂಚಾಯಿತಿ ಸದಸ್ಯ ನುಕ್ಕನಹಳ್ಳಿ ಶ್ರೀನಿವಾಸ್ ಕುಟುಂಬಕ್ಕೆ ಸೇರಿದ ಪಿತ್ರಾರ್ಜಿತವಾಗಿ ಬಂದಿದ್ದ ನಿವೇಶನ ಇದೆ. ನಿವೇಶನದಲ್ಲಿ ಹಿಂದೆ ಹಳೇ ಕಲ್ಲುಚಪ್ಪಡಿ ಮನೆ ನಿರ್ಮಿಸಲಾಗಿತ್ತು. ನಿವೇಶನ ಪಕ್ಕದಲ್ಲಿ ಗ್ರಾಮದ ಅಶ್ವಥ್, ರಾಮು, ಲಕ್ಷ್ಮಣ್ ಎಂಬುವರು ಹೊಸಮನೆ ಕಟ್ಟಿಸುತ್ತಿದ್ದಾರೆ.

ಆದರೆ, ಹೊಸಮನೆ ಅಂದ ಕಾಣಿಸುತ್ತಿಲ್ಲವೆಂದು ದೌರ್ಜನ್ಯವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ರಾತ್ರೋರಾತ್ರಿ ಮನೆ ನೆಲಸಮ ಮಾಡಿದ್ದಾರೆ ಎಂದು ನಿವೇಶನ ಮಾಲೀಕರು ಆರೋಪಿಸಿದರು. ನಿವೇಶನ ತಮಗೆ ಮಾರಾಟ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಆದರೆ, ನಾವು ನಿವೇಶನ ಮಾರಾಟ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಏಕಾಏಕಿ ರಾತ್ರೋರಾತ್ರಿ ಜೆಸಿಬಿಯಿಂದ ಮನೆ ನೆಲಸಮ ಮಾಡಿದ್ದಾರೆ.

ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ದಾಖಲೆಗಳು ನಮ್ಮ ಬಳಿ ಇದೆ. ಆದರೆ ದೌರ್ಜನ್ಯದಿಂದ ನಮ್ಮ ಮನೆ ನೆಲಸಮ ಮಾಡಿದ್ದಾರೆ. ದೌರ್ಜನ್ಯ ನಡೆಸಿದವರ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದರು. ಈ ಬಗ್ಗೆ ವೇಮಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.