ಕೋಲಾರ: ಸಂಸದ ಕೆ. ಎಚ್. ಮುನಿಯಪ್ಪ ಕೆಲಸ ಆಗುವವರೆಗೂ ಕಾಲು ಹಿಡಿಯುತ್ತಾರೆ, ಕೆಲಸ ಆದ ನಂತರ ಅದೇ ಕಾಲನ್ನ ಎಳೆಯುತ್ತಾರೆಂದು ಕೋಲಾರದಲ್ಲಿ ಮಾಜಿ ಶಾಸಕ ಆರ್. ವರ್ತೂರ್ ಪ್ರಕಾಶ್ ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಸಂಸದ ಕೆ. ಎಚ್. ಮುನಿಯಪ್ಪ ಅವರಿಗೆ ನಾಲ್ಕು ದಿನಗಳ ಕಾಲ ಗಡುವು ನೀಡಿರುವುದಾಗಿ ಹೇಳಿದ್ರು. ಅಲ್ಲದೆ ಪ್ರತಿನಿತ್ಯ ನಾವು ಕಾಂಗ್ರೆಸ್‍ನ ಮನೆ ಬಾಗಿಲು ಕಾಯುತ್ತಿದ್ದು, ಒಂದು ವೇಳೆ ಕಾಂಗ್ರೆಸ್ ಸೇರ್ಪಡೆಗೆ ಅವರು ನಿರಾಕರಿಸಿದ್ರೆ, ಸೋಮವಾರದ ನಂತರ ಸಭೆ ಕರೆದು, ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ರು.
ಇನ್ನು ನನ್ನ ಕಾಂಗ್ರೆಸ್‍ಗೆ ಸೇರಿಸಿಕೊಳ್ಳುವುದಕ್ಕೆ ಕೆ. ಎಚ್. ಮುನಿಯಪ್ಪ ಅವರು ಕಸರತ್ತು ನಡೆಸುತ್ತಿದ್ದು, ಜಿಲ್ಲೆಯಲ್ಲಿ ಕೆಲವರು ಇದಕ್ಕೆ ವಿರೋಧ ಮಾಡುತ್ತಿದ್ದಾರೆಂದರು. ಅಲ್ಲದೆ ಕೆ.ಎಚ್. ಮುನಿಯಪ್ಪ ಅವರ ವಿರುದ್ಧ ಜಿಲ್ಲೆಯಲ್ಲಿ ಕೆಲ ಮುಖಂಡರು ಬಂಡಾಯ ಎದ್ದಿದ್ದು, ಸಿದ್ದರಾಮಯ್ಯ ಅವರನ್ನ ಮನವೊಲಿಸಿ ಕಾಂಗ್ರೆಸ್‍ಗೆ ಸೇರಿಸಿಕೊಳ್ಳುವೆ ಅಲ್ಲಿವರೆಗೂ ದುಡುಕಬೇಡ ಎಂಬ ಆಶ್ವಾಸನೆಯನ್ನ ಕೆ. ಎಚ್. ಮುನಿಯಪ್ಪ ನೀಡಿರುವುದಾಗಿ ತಿಳಿಸಿದ್ರು. ಇದಕ್ಕೂ ಮೊದಲು ಸಭೆಗೆ ಬಂದಿದ್ದ ಮುಖಂಡರುಗಳ ಹಾಗೂ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಂಡರು.